ಬೆಳ್ತಂಗಡಿ: ಧರ್ಮಸ್ಥಳ ಯೋಜನೆ ಜನರಲ್ಲಿ ಆರ್ಥಿಕ ಬದಲಾವಣೆಗೆ ಅಗತ್ಯ ಕ್ರಮ ಕೈಗೊಂಡಂತೆ ಜಾತೀಯತೆಯ ಕುರಿತು ಇರುವ ಮನಸ್ಸಿನ ಬಡತನ ನಿವಾರಣೆಯಾಗಬೇಕು. ಹಿಂದುಳಿದವರು ಎಂಬ ಭಾವನೆ ಸಲ್ಲದು. ಎಲ್ಲರೂ ಸಮಾನರು ಎಂಬ ಭಾವನೆ ಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಸೋಮವಾರ ಕ್ಷೇತ್ರದಲ್ಲಿ ಹಿಂದೂ ಜಾಗರಣ ವೇದಿಕೆ ಕರ್ನಾಟಕ ವತಿಯಿಂದ ನಡೆದ ಪದ್ಮವಿಭೂಷಣ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮಗಳ ಜನತೆಗೆ ಧ್ವನಿ ನೀಡಲಾಗಿದೆ. ವ್ಯವಹಾರದಲ್ಲಿ ಜಾಗೃತಿ, ಸಮಾನತೆಯಲ್ಲಿ ಜಾಗೃತಿ ಮೂಡಿಸಲಾಗಿದೆ. ಅನೇಕ ಗೋಚರ ಹಾಗೂ ಅಗೋಚರ ಬದಲಾವಣೆಗಳಾಗಿವೆ ಎಂದರು.
ಕಳೆದ 45 ವರ್ಷಗಳಿಂದ ಹಿಂದೂ ಹಾಗೂ ಜೈನ ಸಮುದಾಯದ ಏಳಿಗೆಗೆ ಸಾಕಷ್ಟು ಕೊಡುಗೆಗಳನ್ನು ಕ್ಷೇತ್ರದ ವತಿಯಿಂದ ನೀಡಲಾಗಿದೆ. ದೇವಸ್ಥಾನ ಯಾವುದು, ದೇವರು ಯಾರು, ಯಾವ ಜಾತಿಯವರದ್ದು ಎಂದು ಇಲ್ಲಿ ಧರ್ಮ ಮಾಡುವಾಗ ನೋಡುವ ಪರಿಪಾಠ ಇಲ್ಲ. ಕಳೆದ ವರ್ಷ 1700 ದೇವಸ್ಥಾನಗಳಿಗೆ ಅನುದಾನ ನೀಡಲಾಗಿದೆ. ಈ ವರ್ಷ ಎ.1ರಿಂದ 26ರ ವರೆಗೆ 70 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡಲಾಗಿದೆ. ಹಿಂದೂ ಜಾಗರಣ ವೇದಿಕೆ ಧರ್ಮಸ್ಥಳಕ್ಕೆ ನೀಡಿದ ಬೆಂಬಲ ನಿಜಕ್ಕೂ ನನಗೆ ನೆಮ್ಮದಿ ತಂದಿದೆ ಎಂದರು.
ಹಿಂದೂ ಜಾಗರಣ ವೇದಿಕೆ ಕರ್ನಾಟಕ ರಾಜ್ಯ ಸಂಚಾಲಕ ಜಗದೀಶ್ ಕಾರಂತ್, ರಾಜ್ಯ ಪ್ರಮುಖ್ ನಾಗೇಂದ್ರ, ಪ್ರಾಂತ ಅಧ್ಯಕ್ಷ ಜೈಕುಮಾರ್, ಪ್ರಾಂತ ಅಧ್ಯಕ್ಷ ಉಲ್ಲಾಸ್, ಮಂಗಳೂರು ವಿಭಾಗ ಸಂಚಾಲಕ ರವಿರಾಜ್, ಪ್ರಾಂತ ಸಂಪರ್ಕ ಪ್ರಮುಖ್ ಕೇಶವಮೂರ್ತಿ, ಮಂಗಳೂರು ವಿಭಾಗ ಅಧ್ಯಕ್ಷ ಗಣಪತಿ ಬಂಗೇರ, ಉತ್ತರ ಪ್ರಾಂತ ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ, ಮಂಗಳೂರು ವಿಭಾಗ ಅಧ್ಯಕ್ಷ ಕಿಶೋರ್ ಕುಮಾರ್, ಪುತ್ತೂರು ಜಿಲ್ಲಾ ಸಂಚಾಲಕ ರವಿರಾಜ್ ಶೆಟ್ಟಿ, ಪ್ರಾಂತ ಕಾರ್ಯದರ್ಶಿ ದೀಪಕ್ ಕಾನಡೆ, ತಾಲೂಕು ಪ್ರಮುಖರಾದ ಪದ್ಮನಾಭ ಶೆಟ್ಟಿಗಾರ್, ಜಗದೀಶ್ ಪ್ರಸಾದ್, ಕಾಂತಾಜೆ ಈಶ್ವರ ಭಟ್, ರಾಘವೇಂದ್ರ ಬಪಡಿತ್ತಾಯ, ರಾಮಚಂದ್ರ ಶೆಟ್ಟಿ, ಅಜಯ್ ಕೊಂಬ್ರಬಲು, ಶೈಲೇಶ್ ಉಜಿರೆ ಮೊದಲಾದವರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.