ಕಾರ್ಕಳ: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯು ರಾಜಕೀಯ ಪ್ರೇರಿತ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಶುಭದ ರಾವ್ ತಿಳಿಸಿದ್ದಾರೆ.
ಕಳೆದ ಒಂಬತ್ತು ವರ್ಷಗಳಿಂದ ಪಡಿತರ ಚೀಟಿಯನ್ನು ವಿತರಿಸಲಾಗದ ಬಿಜೆಪಿಗೆ, ಇದೀಗ ಕಾಂಗ್ರೆಸ್ ಆ ಸಮಸ್ಯೆಯನ್ನು ಪರಿಹರಿಸಿ ಎಲ್ಲಾ ವರ್ಗದ ಜನತೆಗೂ ಪಡಿತ ಸಾಮಾಗ್ರಿಯನ್ನು ಒದಗಿಸುವ ಮೂಲಕ ಯಶಸ್ಸಿನತ್ತ ಹೆಜ್ಜೆ ಹಾಕುತ್ತಿರುವುದನ್ನು ಕಂಡು ದಿಗ್ಬ್ರಮೆಗೊಂಡು ಹತಾಶರಾದ ಶಾಸಕರು ಏನೇನೋ ಮಾತನಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ಕುಳಿತಿರುವ ಫಲಾನುಭವಿಗಳಿಗೆ 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮನೆ ಸಕ್ರಮಗೊಳಿಸುವ ಯೋಜನೆಯನ್ನು ತಿರುಚುವ ಪ್ರಯತ್ನವನ್ನು ಶಾಸಕರು ಮಾಡುತ್ತಿದ್ದು, ಅದು ತನ್ನ ಸಾಧನೆ ಎಂದು ಬಿಂಬಿಸುತ್ತಿರುವುದು ಹಾಸ್ಯಾಸ್ಪದ.
ಸರಕಾರದ ಜನಪರ ಯೋಜನೆಗಳಿಂದ ಬಡ ಜನತೆಗೆ ಸಹಕಾರ ಆಗುತ್ತಿರುವುದನ್ನು ಮನಗಂಡ ಶಾಸಕರು, ತನ್ನ ಅಸ್ತಿತ್ವಕ್ಕಾಗಿ ಈ ರೀತಿಯ ಪ್ರತಿಭಟನೆ ಕೈಗೊಂಡು ವಾಸ್ತವಿಕತೆಯನ್ನು ಮರೆಮಾಚುತ್ತಿರುವದನ್ನು ಈ ಕ್ಷೇತ್ರದ ಜನತೆ ಅರ್ಥೈಸಿಕೊಂಡಿದ್ದಾರೆ. ಬಡವರ ಪರ ನೈಜ ಕಾಳಜಿ ಯಾರಿಗೆ ಎನ್ನುವುದನ್ನು ಕಳೆದ ಐದು ವರ್ಷದ ಬಿಜೆಪಿ ಆಡಳಿತವನ್ನು ತುಲನೆ ಮಾಡಿ ನೋಡಬೇಕಾಗಿದೆ ಎಂದರು.
ಹುಲಿ ಯೋಜನೆ ಪ್ತಸ್ತಾಪ ಯಾಕಿಲ್ಲ: ಪಶ್ಚಿಮ ಘಟ್ಟದಲ್ಲಿ ಜನತೆಯನ್ನು ಒಕ್ಕಲೆಬ್ಬಿಸುವ ಹುಲಿ ಯೋಜನೆ ಅನುಷ್ಟಾನವಾಗುತ್ತಿದ್ದು, ತಮ್ಮ ಪ್ರತಿಭಟನೆಯಲ್ಲಿ ಈ ಬಗ್ಗೆ ಚಕಾರ ಎತ್ತದೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸದ, ಆ ಭಾಗದ ಜನತೆಗೆ ಆದ ಅನ್ಯಾಯವನ್ನು ಮರೆಮಾಚಲು ಪ್ರಯತ್ನಿಸುತ್ತಿರುವುದು ಅವರು ಮಾಡುತ್ತಿರುವ ದ್ರೋಹ. ಈ ಬಗ್ಗೆ ಶಾಸಕರಿಗೆ ಉಳಿದ ನಾಯಕರು ಸರಿಯಾದ ಮಾಹಿತಿ ನೀಡಬೇಕೇ ಹೊರತು, ಶಾಸಕರ ಸುಳ್ಳು ಹೇಳಿಕೆಗಳಿಗೆ ಸಮ್ಮತಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.