ನವದೆಹಲಿ : ಭಾರತೀಯ ಸೇನೆಯ ಮೇಲೆ ನಮಗೆ ವಿಶ್ವಾಸವಿದೆ, ಹೆಮ್ಮೆಯಿದೆ. ಉರಿ ದಾಳಿಯ ಹುತಾತ್ಮ ವೀರ ಯೋಧರಿಗೆ ನನ್ನ ನಮನಗಳು. ಉರಿ ದಾಳಿಯ ಹಿಂದಿರುವವರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮ ಮನ್ ಕೀ ಬಾತ್ನ 24 ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮೋದಿ ಹೇಳಿದರು.
ನಮ್ಮ ಸೈನಿಕರು ಮಾತನಾಡುವುದಿಲ್ಲ, ತಮ್ಮ ಪರಾಕ್ರಮವನ್ನು ತೋರಿಸುತ್ತಾರೆ ಎಂದು ಭಾರತೀಯ ಸೇನೆಯ ಕಾರ್ಯವನ್ನು ಶ್ಲಾಘಿಸಿದ ಮೋದಿ, 11 ನೇ ತರಗತಿಯ ಹರ್ಷವರ್ಧನ್ ಎಂಬ ಹುಡುಗನೊಬ್ಬ ಉರಿ ದಾಳಿಯ ಹಿನ್ನಲೆಯಲ್ಲಿ ಆಕ್ರೋಶಭರಿತನಾಗಿ ಬರೆದ ಪತ್ರವನ್ನು ಓದಿದರು. ಈತ ದಿನಕ್ಕೆ 3 ಗಂಟೆಗಳ ಕಾಲ ಹೆಚ್ಚುವರಿ ಓದಿ, ಉತ್ತಮ ನಾಗರೀಕನಾಗುವ ವಾಗ್ದಾನವನ್ನು ಮಾಡಿಕೊಂಡಿದ್ದಾನೆ. ನಾವೆಲ್ಲರೂ ನಮ್ಮ ಕರ್ತವ್ಯವನ್ನು ನಿರ್ವಹಿಸಿದರೆ ದೇಶ ಅದ್ಭುತ ಸಾಧನೆ ಮಾಡುವುದರಲ್ಲಿ ಸಂಶಯವಿಲ್ಲ ಎಂದರು.
ಶಾಂತಿ, ಸಾಮರಸ್ಯ ಇವು ಸಮಸ್ಯೆಗಳನ್ನು ದೂರ ಮಾಡುತ್ತವೆ. ಇದರೊಂದಿಗೆ ಪ್ರಗತಿಯೂ ಸಾಧ್ಯ. ಚರ್ಚೆಯ ಮೂಲಕ ಕಾಶ್ಮೀರ ಸಮಸ್ಯೆಯನ್ನು ನಿವಾರಿಸಿ ಕಾಶ್ಮೀರ ಜನತೆಯ ರಕ್ಷಣೆಯನ್ನು ಸರ್ಕಾರ ಮಾಡುತ್ತದೆ. ಕಾಶ್ಮೀರಿಗರ ರಕ್ಷಣೆ ನಮ್ಮ ಹೊಣೆ ಎಂದರು.
ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಎಲ್ಲರೂ ಸ್ವಚ್ಛತಾ ಕಾರ್ಯಕ್ರಮಕ್ಕಾಗಿ 2 ರಿಂದ 4 ಗಂಟೆಗಳನ್ನು ತೆಗೆದಿಟ್ಟು, ಸ್ವಚ್ಛತಾ ಕಾರ್ಯಕ್ರಮಗಳ ಫೋಟೋ, ವೀಡಿಯೋವನ್ನು ಆ್ಯಪ್ನಲ್ಲಿ ಹಂಚಿಕೊಳ್ಳಿ. ಯುವಜನರು ‘ವೇಸ್ಟ್ ಟು ವೆಲ್ತ್’ ಕಸದಿಂದ ರಸ ಮಾಡುವತ್ತ ಗಮನಹರಿಸಬೇಕು. ಸ್ಟಾರ್ಟ್ ಅಪ್ ಪ್ರಾರಂಭಿಸಬೇಕು. ಸ್ವಚ್ಛ ಭಾರತ ಅಭಿಯಾನಕ್ಕಾಗಿ ಹೆಲ್ಪ್ಲೈನ್ ನಂ. 1969 ಗೆ ಡಯಲ್ ಮಾಡಿ ನಿಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ನೀವು ಮಾಡಿದ ಸ್ವಚ್ಛತಾ ಕಾರ್ಯದ ಬಗ್ಗೆಯೂ ತಿಳಿಸಿ. ಸ್ವಚ್ಛ ಭಾರತ ಅಭಿಯಾನ 2 ವರ್ಷ ಪೂರೈಸಿದೆ. ಈಗಾಗಲೇ 2.48 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮುಂದಿನ 1 ವರ್ಷದಲ್ಲಿ 1.5 ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಎಲ್ಲರೂ ಸ್ವಚ್ಛತೆಗೆ ಗಮನ ನೀಡಿ, ಸಹಕರಿಸಬೇಕು ಎಂದರು.
ರಿಯೋ ಪ್ಯಾರಾಲಿಂಪಿಕ್ಸ್ ಪದಕ ವಿಜೇತರ ಕಾರ್ಯವನ್ನು ಶ್ಲಾಘಿಸಿ ಅವರಿಗೆ ಅಭಿನಂದಿಸಿದರು.
ನೌಸಾರಿಗೆ ಭೇಟಿಯಿತ್ತಾಗ ಗೌರಿ ಶ್ರದೂಲ್ ಎಂಬ ದಿವ್ಯಾಂಗ ಬಾಲಕಿ ರಾಮಾಯಣದ ಕೆಲವು ಸಾಲುಗಳನ್ನು ಹೇಳಿ ಎಲ್ಲರ ಗಮನಸೆಳೆದಿದ್ದನ್ನು ಹೇಳಿದರು.
ಪಂಡಿತ್ ದೀನದಯಾಳ್ ಉಪಾಧ್ಯಾಯರನ್ನು ಸ್ಮರಿಸಿದ ಮೋದಿಯವರು, ಕೇಂದ್ರ ಸರ್ಕಾರದ ವತಿಯಿಂದ ವರ್ಷಪೂರ್ತಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮಶತಮಾನೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.
ಕೆಲವು ಎನ್ಜಿಓ, ಕಾರ್ಪೊರೇಟ್ ಸಂಸ್ಥೆಗಳು, ಶಾಲೆಗಳು, ಯುವಜನರು ಸೇರಿ ಬಹಳಷ್ಟು ನಗರಗಳಲ್ಲಿ ಅಕ್ಟೋಬರ್ 2 ರಿಂದ 8 ರವರೆಗೆ ‘ಜಾಯ್ ಆಫ್ ಗೀವಿಂಗ್ ವೀಕ್ ‘ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮುಂದಿನ ವಾರ ನಾವು ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಿಸಲಿದ್ದೇವೆ. ಈ ಹಬ್ಬಗಳು ನಮ್ಮ ಏಕತೆ, ಸಾಮರಸ್ಯ ಮತ್ತು ಶಕ್ತಿ ಸಂಕೇತವಾಗಿವೆ.
ಪ್ರಧಾನಿ ಮೋದಿ – ಇದು ಮನ್ ಕಿ ಬಾತ್ ಸರ್ಕಾರದ ಕಾರ್ಯವನ್ನು ಹೊಗಳಿದ್ದಾರೆ, ಬ್ಲೇಮ್ ಗೇಮ್, ರಾಜಕೀಯದ ಬಗ್ಗೆ ಮಾತನಾಡಲು ಮಾಡಬಾರದು ಎಂದು ನನ್ನ ಪ್ರಯತ್ನ ಆಗಿತ್ತು: ಪ್ರಧಾನಿ ನರೇಂದ್ರ ಮೋದಿ
ಮನ್ ಕೀ ಬಾತ್ ಕೇವಲ 15 ರಿಂದ 20 ನಿಮಿಷ ಮಾತನಾಡುವ ಸಂವಾದವಲ್ಲ. ಸಮಾಜ ಪರಿವರ್ತನೆ ಮಾಡಲು ನೆರವಾಗಬೇಕಾದ ಕಾರ್ಯಕ್ರಮ. ಇದು ಆರೋಪ ಪ್ರತ್ಯಾರೋಪ, ರಾಜಕೀಯದ ಬಗ್ಗೆ ಮಾತನಾಡುವ ಕಾರ್ಯಕ್ರಮವಾಗಬಾರದು ಎಂಬುದೇ ನನ್ನ ಪ್ರಯತ್ನವಾಗಿತ್ತು ಎಂದು ದೇಶವಾಸಿಗಳೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಪ್ರಧಾನಿ ಮೋದಿ ಹಂಚಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.