ನವದೆಹಲಿ: ಮುಖೇಶ್ ಅಂಬಾನಿ ಅವರು ರಿಲಯನ್ಸ್ ಜಿಯೋ ನೆಟ್ವರ್ಕ್ನ ಉಚಿತ ವಾಯ್ಸ್ ಕಾಲ್, ಉಚಿತ ರೋಮಿಂಗ್ ಹಾಗೂ ಕಡಿಮೆ ದರಗಳ ಡಾಟಾ ಪ್ಯಾಕ್ಗಳನ್ನು ಘೋಷಿಸಿದ್ದು, ಇದೀಗ ಇತರ ಟೆಲಿಕಾಂ ಕಂಪೆನಿಗಳಾದ ಏರ್ಟೆಲ್, ವೊಡಾಫೋನ್, ಐಡಿಯಾ ಮತ್ತು ಬಿಎಸ್ಎನ್ಎಲ್ ನಡುವೆ ದರ ಸಮರ ಆರಂಭಗೊಂಡಿದೆ.
ಟೆಲಿಕಾಂ ದೈತ್ಯ ಏರ್ಟೆಲ್ ಈಗ 5GB ಉಚಿತ ಇಂಟರ್ನೆಟ್ ಡಾಟಾ ಬಂಪರ್ ಆಫರ್ ಬಿಡುಗಡೆ ಮಾಡಿದೆ.
ಏರ್ಟೆಲ್ ಗ್ರಾಹಕರು ಮೊದಲಿಗೆ http://www.airtel.in/free?icid=home_jackpot_row_4_column_1 ಲಿಂಕ್ ಡೌನ್ಲೋಡ್ ಮಾಡಬೇಕು.
ಗ್ರಾಹಕರು ‘ಜಾಕ್ಪಾಟ್’ ಪ್ರೋಗ್ರಾಂನಲ್ಲಿ ಭಾಗವಹಿಸಲು ಅರ್ಹರಾಗಲಿದ್ದು, ಉಚಿತ ಡಾಟಾವನ್ನು ಬಳಸಬಹುದು. ಇದು ಮಧ್ಯರಾತ್ರಿ 12ರಿಂದ ಬೆಳಗ್ಗೆ 6ರ ವರೆಗೆ ಮಾತ್ರ ಲಭ್ಯವಿರಲಿದೆ.
ಗ್ರಾಹಕರಲ್ಲಿ ಅಸ್ತಿತ್ವದಲ್ಲಿರುವ ಡಾಟಾ ಪ್ಯಾಕ್ಗಳ ಅಡಿಯಲ್ಲಿ ಇರುವ ಡಾಟಾ ಸ್ಪೀಡ್ ಆಧಾರದಲ್ಲೇ ಇದು ಕಾರ್ಯನಿರ್ವಹಿಸಲಿದೆ.
ನಿಗದಿತ ಸಮಯವನ್ನು ಹೊರತುಪಡಿಸಿ ಇತರ ಸಮಯದಲ್ಲಿ ಈ ಡಾಟಾ ಬಳಸಿದಲ್ಲಿ ಗ್ರಾಹಕರ ಅಸ್ತಿತ್ವದಲ್ಲಿ ಡಾಟಾ ಪ್ಯಾಕ್ನಿಂದ ಇದು ಕಡಿತಗೊಳ್ಳಲಿದೆ.
5. ಈ ಆಫರ್ ಸೆಪ್ಟೆಂಬರ್ 30ರ ವರೆಗೆ ತೆರೆದಿರಲಿದೆ.
5GB ಡಾಟಾವನ್ನು 28 ದಿನಗಳ ಒಳಗಾಗಿ ಬಳಸದಿದ್ದಲ್ಲಿ ಇದು ಕಳೆದುಕೊಳ್ಳಲಿದೆ.
5GB ಆಫರ್ ಪ್ರತಿ ತಿಂಗಳು ಮುಂದುವರೆಯಲಿದೆ.
ಏರ್ಟೆಲ್ ಗ್ರಾಹಕ ತಾನು ಬಳಸುವ ಮೊಬೈಲ್ ಸಂಖ್ಯೆಯನ್ನು ಟಾರ್ಗೆಟ್ ಅಪ್ಲಿಕೇಶನ್ನಲ್ಲಿ ನೋಂದಣಿ ಮಾಡಬೇಕಿದೆ.
5GB ಡಾಟಾವನ್ನು ಇತರ ಯಾವುದೇ ಆಫರ್ಗಳ ಜೊತೆ ವಿಲೀನಗೊಳಿಸಲು ಸಾಧ್ಯವಿರಿವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.