ನ್ಯೂಯಾರ್ಕ್: ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ 2017ಕ್ಕೆ ಅಮೇರಿಕಾದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಉನ್ನತ ಮಟ್ಟದ ರಾಜ್ಯ ನಿಯೋಗ ಸದಸ್ಯರು ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಟೆಕ್ ಕಂಪೆನಿಗಳ ಸಿಇಒಗಳನ್ನು ಭೇಟಿ ಮಾಡಿದ ಬಳಿಕ ತಿಳಿಸಿದೆ.
ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ವ್ಯಾಪಾರ ಶೃಂಗಸಭೆಯ ಪ್ರಚಾರಾರ್ಥವಾಗಿ ಭರತ್ ಲಾಲ್ (ಸ್ಥಳೀಯ ಕಮಿಷನರ್) ಗುಜರಾತ್ ಸರ್ಕಾರ, ನೇತೃತ್ವದ ನಿಯೋಗ ರೋಡ್ಶೋಗಳನ್ನು ಆಯೋಜಿಸಿ ವಿವಿಧ ವ್ಯಾಪಾರ ಉದ್ಯಮಿಗಳನ್ನು ಭೇಟಿ ಮಾಡಿದರು.
ಈ ನಿಯೋಗ ಗ್ರೇಟರ್ ಹ್ಯೂಸ್ಟನ್ನ ಇಂಡೋ-ಅಮೇರಿಕನ್ ಚೇಂಬರ್ಗೆ ಭೇಟಿ ನೀಡಿದ್ದು, ವ್ಯಾಪಾರ ಸಮುದಾಯದಿಂದ ಧನಾತ್ಮಕ ಪ್ರತಿಕ್ರಿಯೆ ದೊರೆತಿದೆ.
ವೈಬ್ರೆಂಟ್ ಗುಜರಾತ್ ಭಾರತವನ್ನು ಇಡೀ ವಿಶ್ವದೊಂದಿಗೆ ಸಂಪರ್ಕಿಸಲಿದೆ ಎಂದು ಭರತ್ ಲಾಲ್ ಹೇಳಿದ್ದಾರೆ.
ಕೆನಡಾ ಮತ್ತು ಅಮೇರಿಕಾದ ಸರ್ಕಾರಿ ಅಧಿಕಾರಿಗಳು ಮತ್ತು ವ್ಯಾಪಾರ ಸಮುದಾಯವನ್ನು ಹೂಡಿಕೆದಾರರು, ವಿಜ್ಞಾನಿಗಳು, ಉದ್ಯಮಿಗಳನ್ನು ಸಂಪರ್ಕಿಸಿ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ 2017ರಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು ಈ ರೋಡ್ಶೋದ ಉದ್ದೇಶವಾಗಿದೆ ಎಂದು ಭಾರತದ ಕೌಂಣಸೆಲ್ ಜನರಲ್ ಡಾ. ಅನುಪಮ್ ರೇ ಸಮಾರಂಭವೊಂದರಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಜಿಎಸ್ಟಿ ಬಿಲ್ ಜಾರಿಗೆ ಬಂದ ಬಳಿಕ ವೈಬ್ರೆಂಟ್ ಗುಜರಾತ್ ಭಾರತದಲ್ಲಿ ವ್ಯಾಪಾರಕ್ಕೆ ಅನುವು ಮಾಡುವ ದೊಡ್ಡ ವೇದಿಕೆಯಾಗಲಿದೆ. ಗುಜರಾತ್ ಭೌಗೋಳಿಕವಾಗಿ ಮತ್ತು ಮೂಲಸೌಕರ್ಯದೊಂದಿಗೆ ವ್ಯಾಪಾರಕ್ಕೆ ಅನುಕೂಲಕರವಾಗಿದೆ ಎಂದು ಅನುಪಮ್ ರೇ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.