ವಾಷಿಂಗ್ಟನ್: ನೇಪಾಳದಲ್ಲಿ ಶನಿವಾರ ಸಂಭವಿಸಿದ 7.9 ತೀವ್ರತೆಯ ಭೂಕಂಪಕ್ಕೆ ಭಾರತದ 1ರಿಂದ 10 ಅಡಿ ಭೂಭಾಗ ಉತ್ತರದತ್ತ ಚಲಿಸಿದೆ ಎಂದು ಅಮೆರಿಕ ವಿಜ್ಞಾನಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಭೂಕಂಪಕ್ಕೆ ಹೆಚ್ಚು ಹಾನಿಗೀಡಾದ ಬಿಹಾರದ ಭೂ ಶಿಲೆಯ ಪದರ ನೇಪಾಳದತ್ತ ವಾಲಿದೆ ಎಂಬುದು ಇವರ ಅಭಿಪ್ರಾಯವಾಗಿದೆ.
ಕೊಲಂಬಿಯಾ ವಿಶ್ವವಿದ್ಯಾನಿಲಯದ ಭೂವಿಜ್ಞಾನಿ ಕಾಲಿನ್ ಸ್ಟಾರ್ಕ್ ಅವರ ಪ್ರಕಾರ ‘ಭೂಕಂಪವಾದಾಗ ಮಾತ್ರವಲ್ಲ, ಭೂಶಿಲೆಯ ವಾಲುವಿಕೆ ಎಂಬುದು ಒಂದು ನಿರಂತರ ಪ್ರಕ್ರಿಯೆ. ಪ್ರತಿ ವರ್ಷ ಭಾರತದ ಭೂಭಾಗ 1.8 ಇಂಚಿನಷ್ಟು ಉತ್ತರಕ್ಕೆ ಚಲಿಸುತ್ತದೆ. ಶತಮಾನಗಳಿಂದ ನಡೆಯುತ್ತ ಬಂದಿರುವ ಇಂತಹ ಭೂ ಚಲನೆಯಿಂದಾಗಿಯೇ ಉತ್ತರ ಭಾರತದ ಭೂಪ್ರದೇಶ ನಿಧಾನವಾಗಿ ಟಿಬೆಟ್ ಮತ್ತು ನೇಪಾಳದತ್ತ ಸರಿಯುತ್ತಿದೆ. ಇದರಿಂದ ಅಂತಿಮವಾಗಿ ಹಿಮಾಲಯ ಭಾಗದ ಮೇಲೆ ಒತ್ತಡ ಹೆಚ್ಚಿ ಭೂಕಂಪನಗಳು ಸಂಭವಿಸುತ್ತವೆ.
1934ರಲ್ಲಿ ಬಿಹಾರದಲ್ಲಿ ಸಂಭವಿಸಿದ ಭೂಕಂಪದ ವೇಳೆ ಅಲ್ಲಿನ ಭೂ ಪದರ 12 ಅಡಿಯಷ್ಟು ನೇಪಾಳದ ಕಡೆಗೆ ಜರುಗಿತ್ತು. ಈ ಭೂಕಂಪದಲ್ಲಿ 10 ಸಾವಿರ ಮಂದಿ ಮೃತರಾಗಿದ್ದರು.
ಭೀಕರ ಭೂಕಂಪನಕ್ಕೆ ಕಠ್ಮಂಡು ನಗರವೇ ದಕ್ಷಿಣದತ್ತ ಸುಮಾರು 9 ಅಡಿ ವಾಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.