ನವದೆಹಲಿ : ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಕ್ಕೆ (ಡಿಯುಎಸ್ಯು) ನಡೆದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಯಭೇರಿ ಬಾರಿಸುವ ಮೂಲಕ ಇತರೆ ವಿದ್ಯಾರ್ಥಿ ಸಂಘಟನೆಗಳಿಗೆ ಸೆಡ್ಡು ಹೊಡೆದಿದೆ.
ಒಟ್ಟು ಮೂರು ಪ್ರಮುಖ ಸ್ಥಾನಗಳನ್ನು ಎಬಿವಿಪಿ ಗಳಿಸಿದ್ದರೆ ಎನ್ ಎಸ್ ಯು ಐ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ಮುಖಭಂಗ ಅನುಭವಿಸುವಂತಾಯಿತು.
ಎಬಿವಿಪಿಯ ಅಮಿತ್ ತನ್ವಾರ್, ಪ್ರಿಯಾಂಕಾ ಛಾಬ್ರಿ, ಅಂಕಿತ್ ಸಾಂಘ್ವಾನ್ ಅವರು ಅಧ್ಯಕ್ಷ, ಉಪಾಧ್ಯಕ್ಷ ಹಾಗು ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಅಮಿತ್ (16357 ಮತ) ಸಮೀಪದ ಪ್ರತಿಸ್ಪರ್ಧಿ ಎನ್ಎಸ್ಯುಐನ ನಿಖಿಲ್ ಯಾದವ್ ಅವರನ್ನು 4680 ಮತಗಳ ಅಂತರದಿಂದ ಸೋಲಿಸಿದರು. ಪ್ರಿಯಾಂಕಾ 15592 ಅಂಕಿತ್ 15518 ಮತ ಗಳಿಸಿ ವಿಜಯಶಾಲಿಯಾಗಿದ್ದಾರೆ.
ಶುಕ್ರವಾರ ಚುನಾವಣಾ ಪ್ರಕ್ರಿಯೆ ನಡೆದಿದ್ದು,ಶನಿವಾರ ಫಲಿತಾಂಶ ಪ್ರಕಟಗೊಂಡಿತು. 17712 ನೋಟಾ ಮತಗಳು ಈ ಬಾರಿ ಚುನಾವಣೆಯಲ್ಲಿ ಬಿದ್ದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.