ನ್ಯೂಯಾರ್ಕ್: ಡ್ರಮ್ಗಳು, ವಾದ್ಯಗಳನ್ನು ನುಡಿಸುತ್ತ ಅಮೇರಿಕಾದ ನ್ಯೂಯಾರ್ಕ್ನ ಬೀದಿಗಳಲ್ಲಿ ಪೊಲೀಸ್ ಬ್ಯಾಂಡ್ಗಳು ಸೆಪ್ಟೆಂಬರ್ 9, 2001ರಲ್ಲಿ ಮಡಿವರಿಗೆ ಗೌರವಿಸುವ ಸ್ಮರಣಾರ್ಥ ಮೆರವಣಿಗೆಯಲ್ಲಿ ಶುಕ್ರವಾರ ಪಾಲ್ಗೊಂಡರು.
ಅಮೇರಿಕಾದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಅಲ್-ಖೈದಾ ಸಂಘಟನೆ ವಿಮಾನಗಳ ಮೂಲಕ ನಡೆಸಿದ ದಾಳಿಯಲ್ಲಿ ನ್ಯೂಯಾರ್ಕ್ ಪೊಲೀಸ್ ಇಲಾಖೆ (ಎನ್ವೈಪಿಡಿ)ಯ 23 ಸದಸ್ಯರು ಸೇರಿದಂತೆ ಒಟ್ಟು 71 ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದರು.
ಅನಂತರ ಪ್ರತಿ ವರ್ಷ ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಬ್ಯಾಂಡ್ಗಳು ದಾಳಿ ನಡೆದ ಪ್ರದೇಶದಲ್ಲಿ ವಾದ್ಯಗಳೊಂದಿಗೆ ಮೆರವಣಿಗೆ ನಡೆಸುತ್ತ ಬಂದಿದೆ. ಈ ಬಾರಿ 15ನೇ ವರ್ಷಾಚರಣೆಯ ಪ್ರಯುಕ್ತ ಎನ್ವೈಪಿಡಿ ಇತರ ಪೊಲೀಸ್ ಬ್ಯಾಂಡ್ಗಳನ್ನು ಆಹ್ವಾನಿಸಿದ್ದು, ಬೋಸ್ಟನ್, ಚಿಕಾಗೋ, ಕ್ಲೀವ್ಲ್ಯಾಂಡ್, ಸಿಯಾಟೆಲ್ ಬ್ಯಾಂಡ್ಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿವೆ.
ಎನ್ವೈಪಿಡಿಯ ಎಮರಾಲ್ಡ್ ಸೊಸೈಟಿ ಸದಸ್ಯರು ಕಿಲ್ಟ್ಗಳನ್ನು ಧರಿಸಿ ದಾಳಿ ನಡೆದ ಪ್ರದೇಶದ ಸಮೀಪವಿರುವ ಮನ್ಹಟ್ಟನ್ನಲ್ಲಿರುವ ನ್ಯೂಯಾರ್ಕ್ ಸಿಟಿ ಪೊಲೀಸ್ ಸ್ಮಾರಕದತ್ತ ಮೆರವಣಿಗೆ ನಡೆಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.