ನವದೆಹಲಿ: ಭಾರತದಲ್ಲಿ ಸಣ್ಣ ಪ್ರಮಾಣದ ತೈಲ ಮತ್ತು ಅನಿಲ ಕ್ಷೇತ್ರಗಳಿಗೆ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶುಕ್ರವಾರದಿಂದ ಆರು ದಿನಗಳ ಕಾಲ ಸಿಂಗಾಪುರ ಮತ್ತು ಯುಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಭಾರತದ ವಿದೇಶಿ ಹೂಡಿಕೆಗಾಗಿ ಏರ್ಪಡಿಸಿರುವ ವಿವಿಧ ರೋಡ್ ಶೋಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ತೈಲ ಮತ್ತು ಅನಿಲ ಕ್ಷೇತ್ರಗಳ ಹರಾಜು ಕಾರ್ಯ ಜುಲೈ ತಿಂಗಳಿನಲ್ಲಿ ಹ್ಯೂಸ್ಟನ್ನಲ್ಲಿ ಘೋಷಿಸಲಾಗಿತ್ತು. 67 ಕ್ಷೇತ್ರಗಳು ಸದ್ಯ ಪಟ್ಟಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಹೂಡಿಕೆ ಪ್ರಕ್ರಿಯೆ ಅಕ್ಟೋಬರ್ ವರೆಗೆ ನಡೆಯಲಿದೆ ಎಂದು ಅದು ತಿಳಿಸಿದೆ.
ಈ ಪ್ರದೇಶ 9 ಸೆಡಿಮೆಂಟರಿ ಬೇಸಿನ್ಗಳಲ್ಲಿ ಹಂಚಿಕೆಯಾಗಿದ್ದು, 46 ಕ್ಷೇತ್ರಗಳನ್ನು ಕಾಂಟ್ರಾಕ್ಟ್ ಆಧಾರದಲ್ಲಿ ನೀಡಲಾಗುವುದು. 1500 ಚದರ ಕಿ.ಮೀ. ಭೂಮಿ ಮತ್ತು ಜಲ ಪ್ರದೇಶದಲ್ಲಿ 625 ಮಿಲಿಯನ್ ಬ್ಯಾರೆಲ್ ತೈಲ್ ಮತ್ತು ಅನಿಲ ಉತ್ಪಾದಿಸುವ ಯೋಜನೆ ಹೊಂದಿದೆ.
ನಿರ್ವಾಹಕರಿಗೆ ಕನ್ವೆನ್ಷನಲ್ ಮತ್ತು ನಾನ್-ಕನ್ವೆನ್ಷನಲ್ ಹೈಡ್ರೋಜನ್ ಪರಿಶೋಧನೆಗೆ ಏಕಮಾತ್ರ ಲೈಸನ್ಸ್ ನೀಡಲಾಗುವುದು. ಅವರು ಮಾರುಕಟ್ಟೆ ಬೆಲೆಗೆ ತೈಲ ಮತ್ತು ಅನಿಲ ಮಾರಾಟದ ಹಕ್ಕು ಹೊಂದಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.