ನವದೆಹಲಿ: ಕೇರಳ ಮೂಲದ ಎನ್ಜಿಒ ಸಾಕ್ಷರತೆ ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಪ್ರತಿಷ್ಠಿತ ಯುನೆಸ್ಕೋ ಕಂಫ್ಯೂಷಿಯಸ್ ಸಾಕ್ಷರತಾ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕೇರಳದ ಮಲಪ್ಪುರಂನ ಜನ್ ಶಿಕ್ಷಣ ಸಂಸ್ಥಾನ ಈ ಪ್ರಶಸ್ತಿಯನ್ನು ಪಡೆಯಲಿದ್ದು, ಶುಕ್ರವಾರ ಪ್ಯಾರಿಸ್ನಲ್ಲಿ ನಡೆಯಲಿರುವ ಸಮಾರಂಭವೊಂದರಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಗ್ರಾಮೀಣ ಭಾಗದಲ್ಲಿ ಆಜೀವ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕಾಯಕ್ರಮದ ಕ್ಷೇತ್ರದ ಚಟುವಟಿಕೆಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಅನಾಥ ಜನರ ಜೀವನಾಧಾರಕ್ಕೆ ಸಹಾಯ ಮಾಡುವುದು ಇದರ ಗುರಿಯಾಗಿದೆ.
ಜೆಎಸ್ಎಸ್ ಮಲಪ್ಪುರಂ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪಿ.ವಿ. ಅಬ್ದುಲ್ ವಹಾಬ್ ಮತ್ತು ಘಟಕದ ನಿರ್ದೇಶಕ ವಿ. ಉಮ್ಮೇರಕೋಯ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಇದು ಯುನೆಸ್ಕೋ ಸಾಕ್ಷರತಾ ಕಾರ್ಯಕ್ರಮದ ೫೦ನೇ ವಾರ್ಷಿಕೋತ್ಸವ ಸಮಾರಂಭವಾಗಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.