ನವದೆಹಲಿ: ಪಾಕಿಸ್ಥಾನದ ಭಾರತೀಯ ನಿಯೋಗದ ಆಯುಕ್ತ ಗೌತಮ್ ಬಂಬಾವಾಲೆ ಅವರು ಕರಾಚಿಯಲ್ಲಿ ಭಾಗವಹಿಸಬೇಕಿದ್ದ ಕಾರ್ಯಕ್ರಮವನ್ನು ನಿಗದಿತ ಸಮಯಕ್ಕಿಂತ ಕೇವಲ ಅರ್ಧ ಗಂಟೆ ಮೊದಲು ರದ್ದುಗೊಳಿಸಲಾಗಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸುವಂತೆ ಪಾಕಿಸ್ಥಾನ ಹೈಕಮಿಷನರ್ಗೆ ಭಾರತ ಸಮನ್ಸ್ ಜಾರಿಗೊಳಿಸಿದೆ.
ಭಾರತದ ನಿಯೋಗದ ಕಾರ್ಯದರ್ಶಿ (ಪಶ್ಚಿಮ) ಗೌತಮ್ ಬಂಬಾವಾಲೆ ಅವರ ಬಗ್ಗೆ ಸೌಜನ್ಯತೆ, ಕಾಳಜಿ ತೋರದೇ ಇದ್ದು, ಅವರಿಗೆ ಮುಖಭಂಗ ಮಾಡಿದ ಹಿನ್ನೆಲೆಯಲ್ಲಿ ಪಾಕಿಸ್ಥಾನದ ಹೈಕಮಿಷನರ್ ಅಬ್ದುಲ್ ಬಾಸಿತ್ ಅವರಿಗೆ ಭಾರತದ ವಿದೇಶಾಂಗ ಸಚಿವಾಲಯ ಸಮನ್ಸ್ ಜಾರಿಗೊಳಿಸಿದೆ. ಅಲ್ಲದೇ ಪಾಕಿಸ್ಥಾನದಲ್ಲಿರುವ ಇತರ ನಿಯೋಗಗಳು ಯಾವುದೇ ಅಡಚಣೆ ಇಲ್ಲದೇ ತಮ್ಮ ಕಾರ್ಯಗಳನ್ನು ನಿರ್ವಹಿಸುವಂತೆ ಅನುಮತಿಸಬೇಕೆಂದು ತಿಳಿಸಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಪಾಕಿಸ್ಥಾನದ ವಾಣಿಜ್ಯ ಕಚೇರಿಯಲ್ಲಿ ಬಂಬಾವಾಲೆ ಅವರು ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನದ ಹಸ್ತಕ್ಷೇಪದ ಕುರಿತು ಮಾಡಬೇಕಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು.
ಗೌತಮ್ ಬಂಬಾವಾಲೆ ಅವರು ಜನವರಿಯಲ್ಲಿ ಅಧಿಕಾರ ವಹಿಸಿದ ಬಳಿಕ ಕರಾಚಿಗೆ ಅವರ ಮೊದಲ ಭೇಟಿ ಇದಾಗಿದೆ. ಇತ್ತೀಚೆಗೆ ಅವರಿಗೆ ಪಾಕ್ಗೆ ಭೇಟಿ ನೀಡುವಂತೆ ಕಳುಹಿಸಿದ್ದ ಆಮಂತ್ರಣವನ್ನು ಅವರು ಸ್ವೀಕರಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.