ನವದೆಹಲಿ: ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುತ್ತಿದೆ ಎಂಬ ಹಿನ್ನೆಲೆಯಲ್ಲಿ ಮೊಬೈಲ್ ಕ್ರೀಡೆ Pokemon Go ವಿರುದ್ಧ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಅಮೇರಿಕಾ ಮೂಲದ Nianticಗೆ ಗುಜರಾತ್ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಲೊಕೇಶನ್ ಆಧಾರಿತ ವರ್ಧಿತ ರಿಯಾಲಿಟಿ ಗೇಮ್ Pokemon Go ಅಭಿವೃದ್ಧಿಕಾರರ ವಿರುದ್ಧ ಗುಜರಾತ್ ಹೈಕೋರ್ಟ್ನಲ್ಲಿ ಅಲೈ ಅನಿಲ್ ದಾವೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಪೂಜಾ ಸ್ಥಳಗಳಲ್ಲಿ ಮೊಟ್ಟೆಗಳನ್ನು ತೋರಿಸುವ ಮೂಲಕ ಕೆಲವು ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತಿದೆ ಎಂದು ಆರೋಪಿಸಲಾಗಿತ್ತು.
ಮೊಟ್ಟೆಗಳನ್ನು ಮಾಂಸಾಹಾರ ಎಂದು ಪರಿಗಣಿಸಲಾಗಿದ್ದು, ಹಿಂದೂ ಮತ್ತು ಜೈನರ ಪೂಜಾ ಸ್ಥಳಗಳಲ್ಲಿ ಇದನ್ನು ಸಾಗಿಸುವುದು ಧರ್ಮವಿರೋಧಿಯಾಗಿದೆ ಎಂದು ಅರ್ಜಿದಾರ ದಾವೆ ಹೇಳಿದ್ದಾರೆ.
ಈ ಆಟ ಆಡುವವರು ಮೊಟ್ಟೆಗಳ ರೂಪದಲ್ಲಿ ಅಂಕಗಳನ್ನು ಗಳಿಸುತ್ತಿದ್ದು, ಇದು ಸಾಮಾನ್ಯವಾಗಿ ವಿವಿಧ ಪೂಜಾ ಸ್ಥಳಗಳಲ್ಲಿ ಕಂಡು ಬರುತ್ತದೆ. ಆದ್ದರಿಂದ ಅರ್ಜಿದಾರ ಇದರ ವಿರುದ್ಧ ಅರ್ಜಿ ಸಲ್ಲಿಸಿರುವುದಾಗಿ ಅರ್ಜಿದಾರ ಅನಿಲ್ ದಾವೆ ಅವರ ವಕೀಲ ನಚಿಕೇತ್ ದಾವೆ ಹೇಳಿದ್ದಾರೆ.
ಅಲ್ಲದೇ ಈ ಆಟದಲ್ಲಿ ಆಟಗಾರರು ಪಾಯಿಂಟ್ಗಳನ್ನು ಗಳಿಸಲು ಅತ್ತಿತ್ತ ನಡೆಯಬೇಕಿದ್ದು, ಇದು ಅವರ ಕಾಲುಗಳು ಮತ್ತು ಬದುಕಿಗೆ ಹಾನಿಯುಂಟು ಮಾಡುತ್ತದೆ. ಜನರ ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದೂ ಆರೋಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.