ಕೌಲಾಲಂಪುರ : ಭಯಾನಕ ಇಸಿಸ್ ಸಂಘಟನೆಗೆ ಸೇರಿದ 3 ಉಗ್ರರನ್ನು ಮಲೇಷ್ಯಾದಲ್ಲಿ ಬಂಧನಕ್ಕೊಳಪಡಿಸಲಾಗಿದ್ದು, ಇವರು ಇಲ್ಲಿನ ಪ್ರಸಿದ್ಧ ಹಿಂದೂ ದೇವಾಲಯ ಬಟು ಕೇವ್ಸ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಮಂಗಳವಾರ ಮಲೇಷ್ಯಾದ ಸ್ವಾತಂತ್ರ್ಯೋತ್ಸವ ನಡೆದಿದ್ದು, ಈ ವೇಳೆ ಇವರು ಹಿಂದೂ ದೇಗುಲ, ಮನೋರಂಜನಾ ತಾಣ, ಪೊಲೀಸ್ ಸ್ಟೇಷನ್ಗಳ ಮೇಲೆ ದಾಳಿ ನಡೆಸಲು ಯೋಜನೆ ಹಾಕಿಕೊಂಡಿದ್ದರು ಎಂದು ಅಲ್ಲಿನ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಖಲೀದ್ ಅಬುಬಕ್ಕರ್ ತಿಳಿಸಿದ್ದಾರೆ.
ಮುರುಗನ್ ದೇವರಿಗೆ ಸಮರ್ಪಿಸಲ್ಪಟ್ಟ ಹಿಂದೂ ದೇಗುಲಗಳ ತವರು ಎಂಬ ಪ್ರಸಿದ್ಧಿಯನ್ನು ಬಟುಕೇವ್ ಪಡೆದುಕೊಂಡಿದೆ.
ಆಗಸ್ಟ್ 27 ರಂದು ಸೆಲಂಗೋರ್ನಲ್ಲಿ 20 ವರ್ಷದ ಶಂಕಿತ ಉಗ್ರನನ್ನು ಬಂಧಿಸಲಾಗಿತ್ತು. ಈತನ ಬಳಿಯಿಂದ 425 ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮತ್ತಿಬ್ಬರು ಶಂಕಿತ ಇಸಿಸ್ ಉಗ್ರರನ್ನು ಆಗಸ್ಟ್ 29 ರಂದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಲಾಗಿದೆ.
ಕಟುಕ (ಪ್ರಾಣಿಗಳನ್ನು ವಧೆ ಮಾಡುವವರು)ರಾಗಿ ಮತ್ತು ತಂಪು ಪಾನೀಯ ವ್ಯಾಪಾರ ಮಾಡುವವರಂತೆ ಜೀವನ ನಡೆಸುತ್ತಿದ್ದ ಈ ಮೂವರು ಇಸಿಸ್ನ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಮಲೇಷ್ಯಾದಲ್ಲೂ ಇಸಿಸ್ ಪ್ರಭಾವ ಜೋರಾಗಿದ್ದು, ಇತ್ತೀಚೆಗೆ ಸಿರಿಯಾಗೆ ಪಲಾಯನ ಮಾಡಿದ್ದ ತನ್ನ 68 ನಾಗರಿಕರ ಪಾಸ್ಪೋರ್ಟ್ನ್ನು ಅದು ರದ್ದುಗೊಳಿಸಿದೆ.
ಅಲ್ಲದೆ ಅಲ್ಲಿನ 18 ನಾಗರೀಕರು ಸಿರಿಯಾದಲ್ಲಿ ಇಸಿಸ್ ಪರ ಹೋರಾಡುತ್ತಾ ಪ್ರಾಣ ತ್ಯಾಗ ಮಾಡಿದ್ದಾರೆ ಎನ್ನಲಾಗಿದೆ.
2013 ರ ಬಳಿಕ ಇಸಿಸ್ ಪರ ಒಲವು ಹೊಂದಿದ್ದ 270 ಮಂದಿಯನ್ನು ಅಲ್ಲಿ ಬಂಧನಕ್ಕೊಳಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.