ನ್ಯೂಯಾರ್ಕ್: ಭಾರತೀಯ ಮೂಲದ ಸಾಫ್ಟ್ವೇರ್ ಉದ್ಯಮಿ, ಅಜಯ್ ಗೋಪಾಲ್ ಅವರು ಅಮೇರಿಕಾದ ANSYS ಕಂಪೆನಿಯ ಸಿಇಒ ಆಗಿ ನೇಮಗೊಂಡಿದ್ದಾರೆ. ಅವರು ಮುಂದಿನ ಜನವರಿಯಿಂದ ಪೆನ್ಸಿಲ್ವೇನಿಯಾದ ಈ ಕಂಪೆನಿಯ ಸಿಇಒ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಈ ಕಂಪೆನಿ ಕೈಗಾರಿಕಾ ಉತ್ಪನ್ನ ವಿನ್ಯಾಸಗಳ ಪರೀಕ್ಷೆ, ರಾಕೆಟ್ ಹಾಗೂ ತಂತ್ರಜ್ಞಾನಗಳ ಇಂಜಿನಿಯರಿಂಗ್ ಸಿಮ್ಯುಲೇಶನ್ ಸಾಫ್ಟ್ವೇರ್ ತಯಾರಿಸುತ್ತದೆ.
ತಂತ್ರಜ್ಞಾನ ಉದ್ಯಮದಲ್ಲಿ 25 ವರ್ಷಗಳ ಅನುಭವ ಹೊಂದಿರುವ ಗೋಪಾಲ್ ಅವರು 2011ರಿಂದ ಕಂಪೆನಿಯ ಮಂಡಳಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರನ್ನು ಕಂಪೆನಿಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅವರು ಮಂಡಳಿ ಸದಸ್ಯರಾಗಿಯೂ ಕಾರ್ಯ ಮುಂದುವರೆಸಲಿದ್ದಾರೆ.
ಗೋಪಾಲ್ ಅವರು ತಂತ್ರಜ್ಞಾನ ಮತ್ತು ಸಾಫ್ಟ್ವೇರ್ ಕಂಪೆನಿಗಳಲ್ಲಿ ನಿರ್ವಹಣೆ ಹಾಗೂ ವ್ಯಾಪಾರ ಅಭಿವೃದ್ಧಿ ಕಾರ್ಯಗಳ ಅನುಭವ ಹೊಂದಿದ್ದಾರೆ. ಅವರು Symantec, Hewlett-Packard and IBM ಕಂಪೆನಿಗಳಲ್ಲಿ ಹಲವು ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಂದು ANSYS ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.