ವಾಷಿಂಗ್ಟನ್ : ರಿಯೋ ಒಲಿಂಪಿಕ್ಸ್ನಲ್ಲಿ ಟೆನ್ನಿಸ್ನ ಮಿಕ್ಸ್ಡ್ ಡಬಲ್ಸ್ನ ಸೆಮಿ ಫೈನಲ್ನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿಯನ್ನು ವೀನಸ್ ವಿಲಿಯಂ ಜೊತೆ ಸೇರಿ ಸೋಲಿಸಿದ ಅಮೇರಿಕಾದ ರಾಜೀವ್ ರಾಮ್ ಇದೀಗ ಭಾರೀ ಪ್ರಸಿದ್ಧಿಯನ್ನು ಪಡೆಯುತ್ತಿದ್ದಾರೆ.
ಈ ಜೋಡಿ ಭಾರತೀಯರನ್ನು 2-6, 6-2, 10-3 ರಿಂದ ಸೋಲಿಸಿತ್ತು. ಬಳಿಕ ಫೈನಲ್ನಲ್ಲಿ ಸೋತು ಬೆಳ್ಳಿ ಪದಕವನ್ನು ಪಡೆದುಕೊಂಡಿತ್ತು.
ಆದರೆ ಇದು ರಾಮ್ ಅವರಿಗೆ ದೊರೆತ ಮೊದಲ ಒಲಿಂಪಿಕ್ ಪದಕ.
ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಲೇಖನವೊಂದರ ಪ್ರಕಾರ, ಅಮೇರಿಕಾದಲ್ಲಿನ ಹಿಂದು ಮಕ್ಕಳಿಗೆ ರಾಜೀವ್ ರಾಮ್ ರೋಲ್ ಮಾಡೆಲ್ ಆಗಿದ್ದಾರೆ.
ಅಮೇರಿಕಾದಲ್ಲಿ ಅಪಾರ ಸಂಖ್ಯೆಯಲ್ಲಿ ಹಿಂದುಗಳು ನೆಲೆಸಿದ್ದರೂ ಕೂಡಾ ಅವರು ಯಾರೂ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿಲ್ಲ. ಆದರೆ ಇದೀಗ ರಾಮ್ ಮಾಡಿದ ಸಾಧನೆ ಅಲ್ಲಿನ ಹಿಂದುಗಳಿಗೆ ಸ್ಫೂರ್ತಿಯನ್ನು ತಂದುಕೊಟ್ಟಿದೆ.
“ಕೆಲವೇ ಅಮೇರಿಕನ್ ಹಿಂದುಗಳಿಗೆ ಮಾತ್ರ ಕ್ರೀಡೆಯಲ್ಲಿ ತಳವೂರಲು ಸಾಧ್ಯವಾಗಿದೆ” ಎಂದು ಸ್ವತಃ ರಾಮ್ ಅವರೇ ಹೇಳಿದ್ದಾರೆ.
ಹಿಂದುಗಳದ್ದು ಇಲ್ಲಿ ಸಣ್ಣ ಸಮುದಾಯ. ಅದರಲ್ಲೂ ಅಥ್ಲೆಟಿಕ್ ಹಿನ್ನಲೆಯುಳ್ಳ ಹಿಂದುಗಳದ್ದು ಅದಕ್ಕಿಂತಲೂ ಸಣ್ಣ ಸಮುದಾಯ ಎಂದಿರುವ ರಾಮ್ `ನನ್ನ ಧರ್ಮ ನನ್ನ ಗೆಲುವಿಗೆ ಧನಾತ್ಮಕ ಪ್ರಭಾವ ಬೀರಿತ್ತು’ ಎಂದಿದ್ದಾರೆ.
ನಿನ್ನ ಬುದ್ಧಿ, ನಿನ್ನತನವನ್ನು ನೀನು ಸ್ಥಿಮಿತದಲ್ಲಿಟ್ಟುಕೋ ಎಂದು ಹಿಂದು ಧರ್ಮ ಪ್ರತಿಪಾದಿಸುತ್ತದೆ. ನಿಜವಾಗಿಯೂ ನಮ್ಮ ಬುದ್ಧಿ ಹೇಳಿದ್ದನ್ನೇ ನಮ್ಮ ದೇಹವು ಮಾಡುತ್ತದೆ. ಆಂತರಿಕ ನಿಯಂತ್ರಣವಿದ್ದರೆ ಮನಶ್ಶಾಂತಿ ದೊರೆತು ಅದನ್ನೇ ದೇಹವು ಅನುಸರಿಸುತ್ತದೆ. ಪ್ರತಿನಿತ್ಯವೂ ಯೋಗವನ್ನು ಮಾಡುವುದರಿಂದ ನನಗೆ ಬಹಳಷ್ಟು ಸಹಾಯಕವಾಗಿದೆ ಎಂದಿರುವ ರಾಮ್ ನನ್ನ ಗೆಲುವಲ್ಲಿ ಹಿಂದು ಧರ್ಮ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ.
ನಿನ್ನ ಟೆಂಪರ್ನ್ನು ಮೊದಲು ನಿಯಂತ್ರಣ ಮಾಡು, ಆಮೇಲೆ ಜಯ ಗಳಿಸು ಎಂಬುದಾಗಿ ಪೋಷಕರು ಹಿತನುಡಿ ಹೇಳಿದ್ದರು.
ಮೂಲತಃ ಬೆಂಗಳೂರಿನವರಾದ ರಾಮ್ ಅವರ ಪೋಷಕರು ಹಲವು ವರ್ಷಗಳ ಹಿಂದೆಯೇ ಅಮೇರಿಕಾಕ್ಕೆ ಹೋಗಿ ಅಲ್ಲಿ ನೆಲೆಸಿದ್ದಾರೆ. ರಾಮ್ ಅವರು ಅಮೇರಿಕಾದಲ್ಲಿ ಜನಿಸಿದ್ದರು. ಇದೀಗ ಒಲಿಂಪಿಕ್ ಪದಕ ಗೆದ್ದಿದ್ದಾರೆ.
ಹೀಗಾಗಿ ರಾಮ್ ಇಂದು ಅಮೇರಿಕನ್ ಹಿಂದುಗಳ ಪಾಲಿನ ರೋಲ್ ಮಾಡೆಲ್ ಆಗಿದ್ದಾರೆ ಎಂಬುದಾಗಿ ಲೇಖನ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.