ನವದೆಹಲಿ: ಎನ್ಜಿಒ ಸಂಸ್ಥೆಗಳಿಗೆ ವಿದೇಶಿ ನಿಧಿಗಳ ಹರಿವು ಮೇಲ್ವಿಚಾರಣೆಗೆ ಕೇವಲ ಒಂದೇ ಮೇಲ್ವಿಚಾರಕ ಹೊಂದುವ ದೃಷ್ಟಿಯಿಂದ ಹಣಕಾಸು ಸಚಿವಾಲಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (Fema )ಯನ್ನು ನಿಲ್ಲಿಸಲು ಬಯಸಿದೆ.
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಉಲ್ಲಂಘಿಸಿ ಬಳಿಕ ತಮ್ಮ (Fema) ಕಾಯ್ದೆ ಬಳಸಿ ದಂಡ ಪಾವತಿಯನ್ನು ತಪ್ಪಿಸಲು ಪ್ರಯತ್ನಿಸಿದ 67 ಎನ್ಜಿಒ ಸಂಸ್ಥೆಗಳ ಪಟ್ಟಿಯನ್ನು ಗೃಹ ಸಚಿವಾಲಯ ತಯಾರಿಸಿದೆ.
ಹಣಕಾಸು ಸಚಿವಾಲಯ ತನ್ನ ಅಧಿಕಾರವನ್ನು ಬಳಸಿ ಕಾಯ್ದೆಯನ್ನು ನಿಯಂತ್ರಿಸಿ ಎನ್ಜಿಒಗಳು ಪಡೆಯುತ್ತಿರುವ ನಿಧಿಯಗಳ ನೋಂದಣಿಗೆ FCRA ಕಾಯ್ದೆಯ ಏಕೈಕ ಶಾಸನ ಜಾರಿಗೊಳಿಸುವಂತೆ ಕೋರಿ ಗೃಹ ಸಚಿವಾಲಯ ಪತ್ರ ಬರೆಯಲು ಮುಂದಾಗಿದೆ.
ಎನ್ಜಿಒ ಸಂಸ್ಥೆಗಳಿಗೆ ಹರಿದು ಬರುತ್ತಿರುವ ವಿದೇಶಿ ನಿಧಿಗಳನ್ನು ಒಂದೇ ಸೂರಿನಡಿ ತರುವ ಮೂಲಕ ಮೇಲ್ವಿಚಾರಣೆ ನಡೆಸುವ ಪ್ರಯತ್ನ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನೇಕ ಅಂತಾರಾಷ್ಟ್ರೀಯ ದಾನಿಗಳು, ಯೂರೋಪ್ ಮತ್ತು ಅಮೇರಿಕಾದ ಎನ್ಜಿಒಗಳು ಫೇಮಾ ಅಡಿಯಲ್ಲಿ ನೋಂದಣಿ ಪಡೆದಿದ್ದು, FCRA ಕಾಯ್ದೆ ಉಲ್ಲಂಘಿಸುತ್ತಿವೆ. ಗೃಹ ಸಚಿವಾಲಯ ಇವುಗಳ ಮೇಲೆ ಕಣ್ಗಾವಲು ಇರಿಸಿದೆ ಎಂದು ಎಮ್ಎಚ್ಎ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಸುಮಾರು 34,000 ನೋಂದಾಯಿತ ಎನ್ಜಿಒಗಳಿದ್ದು, FCRA ಕಠಿಣ ಕ್ರಮ ಕೈಗೊಂಡ ಬಳಿಕ 10,000 ಎನ್ಜಿಒಗಳು ತಮ್ಮ ಪರವಾನಿಗೆ ಕಳೆದುಕೊಂಡಿವೆ ಎಂದು ಮೆಚ್ಎ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.