ವಾಷಿಂಗ್ಟನ್ : ಉಭಯ ದೇಶಗಳ ಲಾಜಿಸ್ಟಿಕಲ್ ಮೈತ್ರಿಯನ್ನು ಗಟ್ಟಿಗೊಳಿಸುವ ಮತ್ತು ಎರಡೂ ದೇಶಗಳ ಸೇನೆಗೆ ಪರಸ್ಪರ ರಕ್ಷಣಾ ಪರಿಕರ ವಿನಿಮಯ ಮತ್ತು ನೆಲೆಗಳನ್ನು ಬಳಸಲು ಅನುವು ಮಾಡಿಕೊಡುವ ಮಹತ್ವದ ಒಪ್ಪಂದಕ್ಕೆ ಭಾರತ ಮತ್ತು ಅಮೇರಿಕಾ ಸೋಮವಾರ ಸಹಿ ಹಾಕಿವೆ.
ಲಾಜಿಸ್ಟಿಕ್ ಎಕ್ಸ್ಜೇಂಜ್ ಮೆಮರಾಂಡಮ್ ಆಫ್ ಅಗ್ರೀಮೆಂಟ್ (ಎಲ್ಎಎಂಒಎ) ಒಪ್ಪಂದಕ್ಕೆ ಸಹಿ ಹಾಕಿರುವ ಬಳಿಕ ಪ್ರತಿಕ್ರಿಯೆ ನೀಡಿರುವ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ಅಮೇರಿಕಾ ರಕ್ಷಣಾ ಕಾರ್ಯದರ್ಶಿ ಆ್ಯಷ್ಟನ್ ಕಾರ್ಟರ್ ಅವರು ಈ ಒಪ್ಪಂದವು ವಾಸ್ತವಿಕ ನಿರ್ಣಯ ಮತ್ತು ನಿಯಮಗಳ ಅವಕಾಶವನ್ನು ಕಲ್ಪಿಸಿಕೊಡುವಲ್ಲಿ ಸಹಕಾರಿಯಾಗಲಿದೆ ಎಂದಿದ್ದಾರೆ.
ಪ್ರಕಟಣೆಯ ಪ್ರಕಾರ ಎರಡು ದೇಶಗಳ ರಕ್ಷಣಾ ಬಾಂಧವ್ಯವು ಹಂಚಿಕೆ ಮೌಲ್ಯ ಮತ್ತು ಹಿತಾಸಕ್ತಿಯನ್ನು ಒಳಗೊಂಡಿದೆ. ಅಲ್ಲದೆ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಬದ್ಧವಾಗಿದೆ.
ಪ್ರಸ್ತುತ ಮನೋಹರ್ ಪರಿಕ್ಕರ್ ಅವರು ಅಮೇರಿಕಾ ಪ್ರವಾಸದಲ್ಲಿದ್ದು, ಆಸ್ಟನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.