ವಾಷಿಂಗ್ಟನ್ : ಭಾರತದ ವಾಯುನೆಲೆ ಪಠಾಣ್ಕೋಟ್ ಮೇಲೆ ನಡೆದ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವಿದೆ ಎಂಬುದನ್ನು ಖಚಿತ ಪಡಿಸುವ ಸಾಕ್ಷಾಧಾರಗಳನ್ನು ಅಮೇರಿಕಾ ಇದೀಗ ಒದಗಿಸಿದ್ದು ಪಾಕ್ಗೆ ತೀವ್ರ ಮುಖಭಂಗವಾಗಿದೆ.
2016 ರ ಜನವರಿ 2 ರಂದು ಶಸ್ತ್ರಧಾರಿ ಉಗ್ರರು ಪಠಾಣ್ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ್ದರು. ಇದರಲ್ಲಿ 6 ಯೋಧರು ಮೃತಪಟ್ಟಿದ್ದಾರೆ. ಇದಕ್ಕೆ ಪಾಕಿಸ್ಥಾನ ಮೂಲದ ಜಿಹಾದಿ ಸಂಘಟನೆ ಜೈಶ್-ಇ-ಮೊಹಮ್ಮದ್ ಕಾರಣ ಎಂದು ಭಾರತ ನೇರ ಆರೋಪ ಮಾಡಿತ್ತು. ಆದರೆ ಇದನ್ನು ಪಾಕ್ ನಿರಾಕರಿಸುತ್ತಲೇ ಬಂದಿದೆ.
ಆದರೆ ಇದೀಗ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಜೈಶ್-ಇ-ಮೊಹಮ್ಮದ್ ಸಂಘಟನೆಯ ಸದಸ್ಯನೊಬ್ಬನ ಫೇಸ್ಬುಕ್ ಐಪಿ ಅಡ್ರೆಸ್ ಮತ್ತು ಈ ಸಂಘಟನೆಯ ಹಣಕಾಸು ನೆರವು ನೀಡುತ್ತಿರುವ ಸಂಸ್ಥೆ ಅಲ್ ರಹಮತ್ ಟ್ರಸ್ಟ್ನ ವೆಬ್ಸೈಟ್ನ ಐಪಿ ಅಡ್ರೆಸ್ಗಳು ಪಾಕಿಸ್ಥಾನದಲ್ಲಿದೆ ಎಂದು ಅಮೇರಿಕಾ ರಾಷ್ಟ್ರೀಯ ತನಿಖಾ ತಂಡಕ್ಕೆ ಮಾಹಿತಿ ನೀಡಿದೆ.
ಈ ವೆಬ್ಸೈಟ್ ದಾಳಿಯ ವೇಳೆ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ. ದಾಳಿಯ ವೇಳೆ ಈ ಉಗ್ರರು ದೂರವಾಣಿ ಸಂಭಾಷಣೆಯನ್ನು ಮಾಡಿದ್ದಾರೆ ಎಂಬುದಕ್ಕೂ ಸಾಕ್ಷಿಗಳು ಸಿಕ್ಕಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.