ನವದೆಹಲಿ: ತಮ್ಮ ರಿಯೋ ಒಲಿಂಪಿಕ್ಸ್ ಸಾಧನೆಗಾಗಿ ಸಾಕ್ಷಿ ಮಲಿಕ್, ಪಿ.ವಿ. ಸಿಂಧು ಭಾರತೀಯರಿಂದ ಶ್ಲಾಘನೆ ಪಡೆದಿದ್ದಾರೆ. ಆದರೆ ಇವರನ್ನು ಬಿಟ್ಟು ಇನ್ನೋರ್ವ ಕ್ರೀಡಾಪಟು ತೋರಿದ ಪ್ರದರ್ಶನ ಗಮನಾರ್ಹವಾಗಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾರೆ.
ಭಾರತದ ರೇಸ್-ವಾಕರ್ ಮನೀಶ್ ಸಿಂಗ್ ರಾವತ್ ರಿಯೋ ಒಲಿಂಪಿಕ್ಸ್ನ 20 ಕಿ.ಮೀ. ರೇಸ್ ವಾಕ್ ಇವೆಂಟ್ನ ಫೈನಲ್ನಲ್ಲಿ 13ನೇ ಸ್ಥಾನ ಪಡೆದು ಅಸಾಧಾರಣ ಪ್ರದರ್ಶನ ತೋರಿದ್ದಾರೆ.
ಇವರು ಈ ಸ್ಪರ್ಧೆಯಲ್ಲಿ ನಾಲ್ವರು ವಿಶ್ವ ಚಾಂಪಿಯನ್ರು, ಏಷ್ಯಾದ 3, ಯೂರೋಪ್ನ ಇಬ್ಬರು ಚಾಂಪಿಯನ್ರು ಹಾಗೂ ಇಬ್ಬರು ಒಲಿಂಪಿಕ್ ಪದಕ ವಿಜೇತರನ್ನು ಹಿಂದಿಕ್ಕುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಅವರು 1:21:21 ಗಂಟೆಗಳಲ್ಲಿ ಗುರಿ ತಲುಪಿದ್ದು, ಇದು ಕಂಚಿನ ಪದಕ ವಿಜೇತ ಸ್ಪರ್ಧಿಗಿಂತ 1 ನಿಮಿಷ ಕಡಿಮೆ ಅವಧಿಯಾಗಿದೆ.
ತನ್ನ ತಂದೆಯ ಕಾಲಾನಂತರ ಕುಟುಂಬದ ಜವಾಬ್ದಾರಿ ಹೊತ್ತ ಮನೀಶ್ ರಾವತ್ 2006ರಲ್ಲಿ ವೇಟರ್ ನೌಕರಿಗೆ ಸೇರಿಕೊಂಡರು. ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ ಅಥ್ಲೆಟಿಕ್ಸ್ನ್ನು ವೇದಿಕೆಯನ್ನಾಗಿಸಿ ರೇಸ್ ವಾಕ್ನ್ನು ಆಯ್ದುಕೊಂಡರು.
ಯುಕೆ ಇತ್ತೀಚೆಗೆ ಪದಕ ವಿಜೇತ ಅಥ್ಲೀಟ್ಗಳಿಗಾಗಿ 5.5 ಮಿಲಿಯನ್ ಪೌಂಡ್ ಖರ್ಚು ಮಾಡಿರುವುದಾಗಿ ಹೇಳಿತ್ತು. ಆದರೆ ಯುಕೆ ಮತ್ತು ಜಗತ್ತಿನ ಇತರ ಅಥ್ಲೀಟ್ಗಳನ್ನು ಹೋಲಿಸಿದರೆ ಮನೀಶ್ರ ಸಾಧನೆ ಹೆಚ್ಚು ಉತ್ತಮವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.