ಡೆಹ್ರಾಡೂನ್: ಜನರು ನಡೆದಾಡುವಾಗ ಬೀಳುವ ಭಾರದಿಂದ ವಿದ್ಯುತ್ ಉತ್ಪಾನೆಯಾಗುವ ಸಾಧನವನ್ನು ಉತ್ತರಾಖಂಡ್ನ ಐಐಟಿ-ರೂರ್ಕಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.
ಐಐಟಿ ರೂರ್ಕಿಯ ಮೆಕ್ಯಾನಿಕಲ್ ಮತ್ತು ಕೈಗಾರಿಕಾ ಇಂಜಿನಿಯರಿಂಗ್ ವಿಭಾಗದ ಪಿಎಚ್ಡಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಉಪಾಧ್ಯಕ್ಷ ಕೌಶಿಕ್ ಪಾಲ್ ನೇತೃತ್ವದಲ್ಲಿ ಈ ಸಾಧನವನ್ನು ಅವಿಷ್ಕಾರ ಮಾಡಿದ್ದಾರೆ.
2.50 ಇಂಚು ಅಳತೆಯ ಈ ಸಾಧನದ ತಯಾರಿಕಾ ವೆಚ್ಚ ಕೇವಲ ರೂ.500 ಆಗಿದ್ದು, ಇದನ್ನು ವಾಹನಗಳ ಟೈರ್ಗಳು, ಶೂಗಳಿಗೆ ಅಳವಡಿಸಬಹುದು. ಈ ಸಾಧನದಿಂದ ಉತ್ಪಾದನೆಯಾಗುವ ವಿದ್ಯುತ್ 10 ವ್ಯಾಟ್ ಎಲ್ಇಡಿ ಬಲ್ಬ್ಗೆ ಅಗತ್ಯವಿರುವ ಬೆಳಕು ನೀಡುತ್ತದೆ ಎಂದು ಅಭಿವೃದ್ಧಿಕಾರರು ಹೇಳಿದ್ದಾರೆ.
ಈ ಸಾಧನವನ್ನು ಪಾಲಿಮರ್ ಹಾಗೂ ಕಾರ್ಬನ್ ಮಿಶ್ರಿತ ರಾಸಾಯನಿಕದಿಂದ ತಯಾರಿಸಲಾಗಿದೆ ಎಂದು ಪ್ರೊ. ಕೌಶಿಕ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.