ಸಿಂಗಾಪುರ: ಸಿಂಗಾಪುರದಲ್ಲಿ ಟ್ಯಾಕ್ಸಿಗಳು ಇನ್ಮುಂದೆ ಡ್ರೈವರ್ ಇಲ್ಲದೆ ಚಲಿಸಲಿವೆ. ಇಂಥಹದೊಂದು ವಿಶಿಷ್ಟ ಸೇವೆ ಸಿಂಗಾಪುರದಲ್ಲಿ ಪ್ರಾರಂಭಗೊಂಡಿದೆ.
ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ನುಟುನೋಮಿ ಎಂಬ ಸ್ಟಾರ್ಟಪ್ ಕಂಪನಿ ಗುರುವಾರ ಸಿಂಗಾಪುರದಲ್ಲಿ ಚಾಲಕರಹಿತ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ್ದು ಇದು ವಿಶ್ವದ ಮೊದಲ ಚಾಲಕ ರಹಿತ ಕಾರು ಸೇವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನುಟುನೋವಿ ಕಂಪನಿ ಈ ಸ್ವಯಂಚಾಲಿತ ಕಾರು ಸೇವೆಯನ್ನು ಪ್ರಾರಂಭಿಸಿದ್ದು ಒಂದು ರೀತಿಯ ಹೊಸ ಆವಿಷ್ಕಾರವೇ ಸರಿ. ಏಕೆಂದರೆ ನುಟುನೋವಿ ಕಂಪನಿಯನ್ನು ಅಮೆರಿಕದ ಎಂಐಟಿಯ ಪದವೀಧರರಾದ ಲ್ಯಾಗ್ನೆಮ್ಮಾ ಮತ್ತು ಎಮಿಲಿಯೋ ಇವರು ಸೇರಿ 2013 ರಲ್ಲಿ ಪ್ರಾರಂಭಿಸಿದ್ದು, ಇವರು ಕಾರುಗಳಿಗೆ ಸೆನ್ಸರ್, ಕ್ಯಾಮರಾ ಅಳವಡಿಸುವುದು ಇಂತಹ ಕೆಲಸವನ್ನು ಮಾಡಲು ಪ್ರಾರಂಭಿಸಲಾಗಿತ್ತು. ಆದರೆ ಕೆಲ ತಿಂಗಳ ಹಿಂದಷ್ಟೇ ಈ ಕಂಪನಿಗೆ ಟ್ಯಾಕ್ಸಿ ಸೇವೆ ಆರಂಭಿಸಲು ಅನುಮತಿ ನೀಡಿದ್ದರ ಪರಿಣಾಮ ಸ್ವಯಂಚಾಲಿತ ಸಾಫ್ಟ್ವೇರ್ ರಚಿಸಿ ಇದೀಗ ಗ್ರಾಹಕರಿಗೆ ವಿಶ್ವದ ಮೊದಲ ಡ್ರೈವರ್ಲೆಸ್ ಕಾರ್ ಸೇವೆಯನ್ನು ಪ್ರಾರಂಭಿಸಿದೆ.
ಗುರುವಾರದಿಂದ ಪ್ರಾರಂಭವಾಗಿರುವ ಈ ಸೇವೆ ಪ್ರಸ್ತುತ ನಗರದ 6.5 ಚ.ಮೈಲು ಸುತ್ತಳತೆಗೆ ಮಾತ್ರ ಸೀಮಿತಗೊಳಿಸಿದ್ದು, ಮೊದಲೇ ನೋಂದಣಿ ಮಾಡಿಕೊಂಡ ಗ್ರಾಹಕರಿಗೆ ಫ್ರೀ ಟ್ಯಾಕ್ಸಿ ಸೇವೆ ಲಭ್ಯವಾಗಿತ್ತು. ಸದ್ಯಕ್ಕೆ 6 ಕಾರುಗಳನ್ನು ಕಂಪನಿಗಳನ್ನು ಪರಿಚಯಿಸಿದ್ದು, ವರ್ಷಾಂತ್ಯದೊಳಗೆ ಇದನ್ನು 12 ಕ್ಕೆ ಏರಿಸುವ ಚಿಂತನೆ ಹೊಂದಿದ್ದು 2018 ರೊಳಗೆ ಸಿಂಗಾಪುರದಲ್ಲಿ ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸುವುದಾಗಿ ಕಂಪನಿ ಹೇಳಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.