ನವದೆಹಲಿ: ‘ಭಾರತ 2014ರ ಒಲಿಂಪಿಕ್ ಗೇಮ್ಸ್ ಆಯೋಜನೆಗೆ ಬಿಡ್ ಮಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪ್ರಸ್ತಾವಣೆ ಸಲ್ಲಿಸಿಲ್ಲ’ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥೋಮಸ್ ಬಾಚ್ ತಿಳಿಸಿದ್ದಾರೆ.
ಭಾರತ ಭೇಟಿಯಲ್ಲಿರುವ ಬಾಚ್ ಸೋಮವಾರ ಪ್ರಧಾನಿಯನ್ನು ಕಂಡು ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಂಪೂರ್ಣ ತಯಾರಿ ಮತ್ತು ಅತ್ಯಂತ ಪರಿಣತ ತಂಡದ ಉಸ್ತುವಾರಿಯಿಂದಷ್ಟೇ ಕೂಟದ ಆಯೋಜನೆ ಮಾಡಲು ಸಾಧ್ಯ. ಸೆಪ್ಟೆಂಬರ್ 15ರೊಳಗೆ ಬಿಡ್ ಸಲ್ಲಿಸಲು ತಯಾರಿ ನಡೆಸುವುದು ಕೂಡ ಕಷ್ಟವೆಂದು ಪ್ರಧಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ನಿರ್ಣಯವನ್ನು ನಾನು ಗೌರವಿಸುತ್ತೇನೆ. ಭಾರತವು ಒಲಿಂಪಿಕ್ಸ್ ಆಯೋಜನೆಗೆ ಬಿಡ್ ಸಲ್ಲಿಸಲಿದೆ ಎಂಬ ಮಾತುಗಳು ಕೇಳಿಬಂದಾಗ ನನಗೆ ಅಚ್ಚರಿಯಾಗಿತ್ತು. ಕಡಿಮೆ ಅವಧಿಯಲ್ಲಿ ಇದು ಸಾಧ್ಯವೇ ಎಂಬ ಪ್ರಶ್ನೆ ಕಾಡಿತ್ತು. ಕಳೆದ ವರ್ಷವಷ್ಟೇ ಐಒಎಯು ಐಒಸಿಯ ಅಮಾನತಿನಿಂದ ಮುಕ್ತವಾಗಿದೆ. ಇದು ಸಂತಸದ ವಿಷಯ’ ಎಂದರು.
ಭಾರತವನ್ನು ಕ್ರೀಡಾ ಮೂಲಸೌಕರ್ಯದ ಹಬ್ನ್ನಾಗಿ ಪರಿವರ್ತಿಸಲು ಪ್ರಧಾನಿ ಬಾಚ್ ಅವರ ಸಹಕಾರವನ್ನು ಕೇಳಿದರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.