ನ್ಯೂಯಾರ್ಕ್: ಭವಿಷ್ಯದಲ್ಲಿ ನೀವು ಸೇವಿಸಬಹುದಾದ ವಿಷರಹಿತ ಬ್ಯಾಟರಿಗಳು ರೋಗ ಚಿಕಿತ್ಸಕ ಔಷಧೀಯ ಗುಣಗಳನ್ನು ಹೊಂದಲಿವೆ.
ಇಂತಹ ಔಷಧೀಯ ಗುಣದ ಬ್ಯಾಟರಿಗಳನ್ನು ತಯಾರಿಸುವ ಗುರಿ ಪ್ರಗತಿಯೆಡೆಗೆ ಸಾಗುತ್ತಿದ್ದು, ಕೂದಲು, ಕಣ್ಣು, ಚರ್ಮಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಮೆಲನಿನ್ ವರ್ಣದ್ರವ್ಯಗಳಿಂದ ತಯಾರಿಸಲ್ಪಡಲಿವೆ ಎಂದು ವೈದ್ಯರ ತಂಡ ತಿಳಿಸಿದೆ.
ದಶಕಗಳ ಕಾಲದಿಂದಲೂ ಜನರು ತಮ್ಮ ರೋಗಗಳಿಗೆ ರೋಗ ಚಿಕಿತ್ಸಕ, ಸೇವಿಸಬಹುದಾದ ಇಲೆಟ್ರಾನಿಕ್ ಸಾಧನ ಹೊಂದುವ ಬಗ್ಗೆ ಯೋಚಿಸುತ್ತಿದ್ದರು. ಆದರೆ ಇದನ್ನು ಪ್ರತಿನಿತ್ಯ ಸೇವಿಸಬೇಕಾದರೆ ಇದರಲ್ಲಿರಿವ ವಿಷಾಂಶ (ನಂಜು) ಬಗ್ಗೆ ನಾವು ಖಚಿತಪಡಿಸಬೇಕಿದೆ ಎಂದು ಕ್ರಿಸ್ಟೋಫರ್ ಬೆಟ್ಟಿಂಜರ್ ಹೇಳಿದ್ದಾರೆ.
20 ವರ್ಷಗಳ ಹಿಂದೆಯೇ ವಿಜ್ಞಾನಿಗಳು ಅಂತರ್ದಶಕ (ಹೊಟ್ಟೆಯ ಭಾಗ)ಕ್ಕೆ ಮಾತ್ರೆಗಳಂತಹ ಸೇವಿಸಬಹುದಾದ ಬ್ಯಾಟರಿ ಚಾಲಿತ ಕ್ಯಾಮರಾ ಅಭಿವೃದ್ಧಿಪಡಿಸಿದ್ದರು. ಇದು ಜೀರ್ಣಾಂಗ ವ್ಯವಸ್ಥೆಯ ಚಿತ್ರಣವನ್ನು ತೆಗೆಯುತ್ತದೆ. ಆದರೆ ಇದು ಜೀರ್ಣಾಗ ವ್ಯೂಹದಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಅದು ಅಪಾಯಕಾರಿಯಾಗಬಹುದು. ರೋಗ ಚಿಕಿತ್ಸಕ ಬ್ಯಾಟರಿಗಳು ದೇಹದಲ್ಲಿ 20 ಟಾಸುಗಳಿಗಿಂತ ಹೆಚ್ಚು ಕಾಲ ಇರುವುದಿಲ್ಲ ಎಂದು ಬೆಟ್ಟಿಂಜರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.