×
Home About Us Advertise With s Contact Us

ಹರಾಜುಗೊಳ್ಳಲಿರುವ ಮುಹಮ್ಮದ್ ಅಲಿ ವಸ್ತುಗಳಿಗೆ ಭಾರೀ ಬೇಡಿಕೆ

Belt

ಲಂಡನ್ : ಇತ್ತೀಚೆಗೆ ನಿಧನರಾದ ಖ್ಯಾತ ಬಾಕ್ಸರ್ ಮುಹಮ್ಮದ್ ಅಲಿ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಸೆಪ್ಟೆಂಬರ್‌ನಲ್ಲಿ ಹರಾಜಿಗೆ ಇಡಲಾಗುತ್ತಿದೆ.

ಅಲಿ ಅವರ 1974 ರ ಡಬ್ಲ್ಯುಬಿಸಿ ಹೆವಿ ವ್ಹೈಟ್ ಚಾಂಪಿಯನ್‌ಶಿಪ್ ಬಾಕ್ಸಿಂಗ್ ಬೆಲ್ಟ್ ಮತ್ತು ಇಸ್ಲಾಂಗೆ ಮತಾಂತರವಾಗುವ ಬಗ್ಗೆ ಅವರು ಬರೆದ ಕೈಬರಹದ ಪತ್ರ ಕೂಡಾ ಹರಾಜುಗೊಳಪಡುತ್ತಿದೆ.

ಜೂನ್‌ನಲ್ಲಿ ಅವರು ನಿಧನರಾದ ಬಳಿಕ ನಡೆಯುತ್ತಿರುವ ಅತಿ ದೊಡ್ಡ ಹರಾಜು ಪ್ರಕ್ರಿಯೆ ಇದಾಗಿದೆ. ಹೆರಿಟೆಜ್ ಬಾಕ್ಸಿಂಗ್ ಸಂಸ್ಥೆ ಈ ಹರಾಜಿನ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಇಸ್ಲಾಂ ಮತಾಂತರದ ಬಗ್ಗೆ 1964 ರಲ್ಲಿ ಅವರು ಲೈಫ್ ಮ್ಯಾಗಜಿನ್‌ಗೆ ಕೈಬರಹದ ಮೂಲಕ ಬರೆದ ಪತ್ರ ಹರಾಜಿನಲ್ಲಿ 100 ಸಾವಿರ ಡಾಲರ್ ಮೂಲಬೆಲೆಯನ್ನು ಹೊಂದಿದೆ.

ಡಬ್ಲ್ಯುಬಿಸಿ ಬೆಲ್ಟ್ 600 ಸಾವಿರ ಡಾಲರ್‌ಗೆ ಹರಾಜುಗೊಳ್ಳುವ ನಿರೀಕ್ಷೆಯಿದೆ.

ಪಾರ್ಕಿಸನ್ ಕಾಯಿಲೆಯಿಂದ ಬಳಲುತ್ತಿದ್ದ ಅಲಿ ಅವರು ತಮ್ಮ 74 ನೇ ವಯಸ್ಸಿನಲ್ಲಿ 2016 ರ ಜೂನ್ 4 ರಂದು ನಿಧನರಾದರು.

 

Recent News

Back To Top
error: Content is protected !!