ಬೀಜಿಂಗ್ : ಅತೀವ ವಾಯುಮಾಲಿನ್ಯಕ್ಕೆ ಒಳಗಾಗಿರುವ ಬೀಜಿಂಗ್ನಲ್ಲಿ ಗ್ಯಾಸ್ ವಾಹನಗಳ ಬದಲು ಎಲೆಕ್ಟ್ರಿಕ್ ಸ್ಯಾನಿಟೇಷನ್ ವಾಹನಗಳ ಬಳಕೆ ಮಾಡಲಾಗುತ್ತಿದೆ.
ವಾಹನಗಳಿಂದ ಹೊರಹೊಮ್ಮುವ ಹೊಗೆಯನ್ನು ಕಡಿಮೆಗೊಳಿಸುವ ಸಲುವಾಗಿ ಈ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ.
ಗ್ಯಾಸ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಅಪ್ಗ್ರೇಡ್ ಮಾಡುವ ಕಾರ್ಯವನ್ನು ಬೀಜಿಂಗ್ ಎರ್ನಾಮೆಂಟ್ ಸ್ಯಾನಿಟೇಷನ್ ಇಂಜಿನಿಯರಿಂಗ್ ಗ್ರೂಪ್ ಮತ್ತು ಚೈನಿಸ್ ಮೋಟಾರ್ ಕಂಪೆನಿ ಡಿವೈಡಿ ಮಾಡುತ್ತಿದೆ.
ಆಗಸ್ಟ್ 18 ರಿಂದಲೇ ಮೊದಲ ಹಂತದ ಎಲೆಕ್ಟ್ರಿಕ್ ಸ್ಯಾನಿಟೇಷನ್ ವೆಹಿಕಲ್ಗಳು ಬೀಜಿಂಗ್ನಲ್ಲಿ ಕಾರ್ಯಾರಂಭ ಮಾಡಿದೆ. ಈ ವಾಹನಗಳಿಗೆ 26 ಮೋಡ್ಗಳಿದ್ದು, ರಸ್ತೆ ಗುಡಿಸುವಿಕೆ, ಗಾರ್ಬೇಜ್ ಸಾಗಣೆ, ಗಾರ್ಬೇಜ್ ವಿಸರ್ಜನೆಯಂತಹ ಹಲವು ಸೌಲಭ್ಯಗಳನ್ನು ಇದು ಒಳಗೊಂಡಿದೆ.
ಗ್ಯಾಸ್ ಟ್ರಕ್ಗೆ ಹೋಲಿಸಿದರೆ ವರ್ಷಕ್ಕೆ 80 ಟನ್ಗಳಷ್ಟು ಕಡಿಮೆ ಇಂಗಾಲವನ್ನು ಇದು ಉತ್ಪಾದಿಸುತ್ತದೆ. 20 ಮಿಲಿಯನ್ ಜನಸಂಖ್ಯೆ ಇರುವ ಬೀಜಿಂಗ್ ನಗರ ಜಗತ್ತಿನ 9 ನೇ ಅತಿ ಮಲಿನ ನಗರ ಎಂದು ಪರಿಗಣಿಸಲ್ಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.