ಕೋಲ್ಕತಾ: ಭಾರತ ಮತ್ತು ಬಾಂಗ್ಲಾದೇಶದ ಬಂಗಾಳಿ ಶೋತ್ರಗಳಿಗೆ ಬಂಗಾಳಿ ರೇಡಿಯೋ ಸೇವೆ ‘ಆಕಾಶವಾಣಿ ಮೈತ್ರಿ’ಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬಿಡುಗಡೆ ಮಾಡಿದ್ದಾರೆ.
ಕೋಲ್ಕತಾದ ರಾಜಭವನದಲ್ಲಿ ರೇಡಿಯೋ ಸೇವೆ ಬಿಡುಗಡೆ ಮಾಡುತ್ತ ಮಾತನಾಡಿದ ಮುಖರ್ಜಿ, ಬಂಗಾಳಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಈ ರೇಡಿಯೋ ಚಾನೆಲ್ ಬಿಡುಗಡೆ ಮಾಡಲಾಗಿದ್ದು, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧಗಳ ಹೊಸ ಅಧ್ಯಾಯ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ.
ಆಕಾಶವಾಣಿ ಮೈತ್ರಿ ಚಾನೆಲ್ ಮತ್ತು ಅದರ ವೆಬ್ಸೈಟ್ ಆಲ್ ಇಂಡಿಯಾ ರೇಡಿಯೋದ ಒಂದು ಅನನ್ಯ ಉದ್ಯಮ ಮತ್ತು ಯೋಜನೆಯಾಗಿದೆ. ಇದು ಕೇವಲ ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ನೆರೆಯ ರಾಷ್ಟ್ರಗಳಿಗೆ ಮಾತ್ರವಲ್ಲ, ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಬಂಗಾಳಿಗಳಿಗೆ ಇರಲಿದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಭಾರತ ನೆರೆಯ ಬಾಂಗ್ಲಾದೇಶದ ಜೊತೆ ದ್ವಿಪಕ್ಷೀಯ ಸಂಬಂಧ, ಪರಂಪರೆ, ಸಂಸ್ಕೃತಿ, ಭಾಷೆ, ಸಾಮೀಪ್ಯಕ್ಕೆ ಹೆಚ್ಚಿನ ಪ್ರಾಮಖ್ಯತೆ ನೀಡಿದೆ. ಆಕಾಶವಾಣಿ ಮೈತ್ರಿ ಚಾನೆಲ್ ಬಾಂಗ್ಲಾದೇಶಿಗರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದು, ಇದನ್ನು ೧೯೭೧ರ ಬಾಂಗ್ಲಾದೇಶ ವಿಮೋಚನಾ ಚಳುವಳಿ ಸಂದರ್ಭ ಬಿಡುಗಡೆ ಮಾಡಲಾಗಿತ್ತು ಎಂದು ಈ ವೇಳೆ ಹೇಳಿದ್ದಾರೆ.
ಈ ಚಾನೆಲ್ನ್ನು ಹೈಪವರ್ 1000 ಡಿಆರ್ಎಂ ಟ್ರಾನ್ಸಮಿಟರ್ ಮೂಲಕ ಮೀಡಿಯಂ ವೇವ್ ಪ್ರಸಾರ ಮಾಡಲಾಗುತ್ತಿದ್ದು, ಜಗತ್ತಿನಾದ್ಯಂದ ಜನರು ಇದನ್ನು ಆಕಾಶವಾಣಿ ಮೈತ್ರಿ ವೆಬ್ಸೈಟ್ ಮತ್ತು ಮೊಬೈಲ್ ಆಪ್ನಲ್ಲಿ ಲಭ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.