ಪುಣೆ : ಹೆಚ್ಚಿನ ಜನರು ಪರಿಸರದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದಾರೆ ಮಾತ್ರವಲ್ಲ ಅದರ ರಕ್ಷಣೆ ಮತ್ತು ಸಂರಕ್ಷಣೆಗೆ ತಮ್ಮಂದಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇಂದಿನ ದಿನಗಳಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನಿಗೆ ನಿರ್ಬಂಧ ಹಾಕಿ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ರಚನೆ ಮಾಡಲಾಗುತ್ತಿದೆ. ಆದರೆ ಪುಣೆಯ ರಮೇಶ್ ಖೇರ್ ಮತ್ತು ವಿವೇಕ್ ಕಾಂಬ್ಳೆ ಎಂಬ ಸ್ನೇಹಿತರು ಕೆಲ ವರ್ಷಗಳ ಹಿಂದೆಯೇ ಆಲಮ್ನಿಂದ (ಪಟಿಕ) ಗಣಪತಿಯ ಮೂರ್ತಿ ತಯಾರಿ ಮಾಡುತ್ತಿದ್ದಾರೆ.
ಆಲಮ್ನ್ನು ನೀರಿನ ಶುದ್ಧೀಕರಣಕ್ಕಾಗಿ ಬಳಸಲಾಗುತ್ತದೆ. ಹೀಗಾಗಿ ಗಣಪತಿ ವಿಸರ್ಜನೆ ವೇಳೆ ಉಂಟಾಗುವ ಮಾಲಿನ್ಯವನ್ನು ತಡೆಯುವ ಸಲುವಾಗಿ ಇವರು ಅಲಮ್ನಿಂದ ಗಣಪತಿಯನ್ನು ರಚಿಸುತ್ತಿದ್ದಾರೆ.
ವಿವೇಕ್ ಕಾಂಬ್ಳೆ ಅಲುಮ್ನಿಂದ ಮೂರ್ತಿ ತಯಾರಿಸುವ ಕಾರ್ಯ ಮಾಡುತ್ತಿದ್ದು ಈ ಐಡಿಯಾವನ್ನು ತನ್ನ ಸ್ನೇಹಿತ ರಮೇಶ್ ಖೇರ್ ತನಗೆ ನೀಡಿದ್ದಾಗಿ ಹೇಳುತ್ತಾರೆ.
ನೀರಿನಲ್ಲಿ ಆಲಮ್ ಬಹುಬೇಗ ಕರಗುತ್ತದೆ. ಅಲ್ಲದೆ ನೀರಿನ ಮಾಲಿನ್ಯದ ಮಟ್ಟವನ್ನೂ ತಗ್ಗಿಸುತ್ತದೆ ಎಂದು ಅವರು ಹೇಳುತ್ತಾರೆ.
ಆಲಮ್ ಕಲ್ಲಿನ ಗಾತ್ರದ ಮೇಲೆ ಮೂರ್ತಿಯ ಗಾತ್ರ ಅವಲಂಬಿತವಾಗಿರುತ್ತದೆ. ಗರಿಷ್ಠ ಎಂದರೆ ೧೦ ಇಂಚುಗಳಷ್ಟು ಇರುತ್ತದೆ. 15 ಕೆ.ಜಿ. ತೂಕವಿರುತ್ತದೆ.
ಗಣಪತಿಯ ಅಲಂಕಾರ ಮತ್ತು ಸೌಂದರ್ಯಕ್ಕಾಗಿ ಆಹಾರಗಳಲ್ಲಿ ಬಳಸುವ ಬಣ್ಣವನ್ನು ಬಳಸಲಾಗುತ್ತದೆ. ಇಂತಹುದೇ ಪ್ರತ್ಯೇಕ ವಿನ್ಯಾಸ ಇಲ್ಲದೇ ಇರುವುದೇ ಆಲಮ್ ಗಣಪನಿಗೆ ಇರುವ ವಿಶೇಷತೆ.
ಒಂದು ಆಲಮ್ ಗಣಪ ರಚನೆಗೆ ಕಾಂಬ್ಳೆ 8 ದಿನಗಳನ್ನು ತೆಗೆದುಕೊಳ್ಳುತ್ತಾರೆ. ಒಂದು ಚಿಕ್ಕ ಎಡವಟ್ಟಾದರೂ ಅದನ್ನು ಬಿಟ್ಟು ಬೇರೆಯದೇ ಗಣಪನನ್ನು ರಚಿಸಬೇಕಾಗುತ್ತದೆ ಎನ್ನುತ್ತಾರೆ ಅವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.