ನವದೆಹಲಿ : ಟರ್ಕಿಯಲ್ಲಿ ವಿವಿಧ ದುಷ್ಕೃತ್ಯಗಳನ್ನು ಎಸಗುತ್ತಿರುವ ಫೆತುಲ್ಲಾ ಗುಲೆನ್ ಟೆರರಿಸ್ಟ್ ಆರ್ಗನೈಸೇಷನ್ (ಎಫ್ಇಟಿಓ) ಎಂಬ ಉಗ್ರ ಸಂಘಟನೆ ಭಾರತಕ್ಕೂ ನುಸುಳಿದೆ ಎಂಬ ಎಚ್ಚರಿಕೆಯನ್ನು ಟರ್ಕಿ ನೀಡಿದೆ.
ಟರ್ಕಿಶ್ ವಿದೇಶಾಂಗ ಸಚಿವ ಮೈಲ್ತು ಕಾವ್ಸೋಗ್ಲು ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
ಎಫ್ಇಟಿಓ ಒಂದು ಸೀಕ್ರೆಟೀವ್ ಟ್ರಾನ್ಸ್ನ್ಯಾಷನಲ್ ಕ್ರಿಮಿನಲ್ ನೆಟ್ವರ್ಕ್ ಎನ್ನಲಾಗಿದ್ದು, ಇದರ ಅಸ್ತಿತ್ವ ಜಗತ್ತಿನ ಎಲ್ಲ ಕಡೆಯೂ ಇದೆ. ದುರಾದೃಷ್ಟವಶಾತ್ ಸಂಸ್ಥೆ ಮತ್ತು ಸ್ಕೂಲ್ಗಳ ಮೂಲಕ ಇದು ಭಾರತಕ್ಕೂ ನುಸುಳಿದೆ ಎಂದು ಕಾವ್ಸೋಗ್ಲು ಹೇಳಿದ್ದಾರೆ.
ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪಿಟಿಐ ಗೆ ಸಂದರ್ಶನ ನೀಡಿದ ಅವರು ಎಫ್ಇಟಿಓ ಅಸ್ತಿತ್ವವಿರುವ ಜಗತ್ತಿನ ಎಲ್ಲಾ ದೇಶಗಳಿಗೂ ಶೀಘ್ರದಲ್ಲಿ ಎಚ್ಚೆತ್ತುಕೊಳ್ಳುವಂತೆ ತಿಳಿಸಿದ್ದೇವೆ. ಭಾರತದ ವಿದೇಶಾಂಗ ಸಚಿವರೊಂದಿಗೆ ಈ ವಿಷಯ ಚರ್ಚಿಸಿದ್ದೇವೆ ಎಂದಿದ್ದಾರೆ.
ಎಫ್ಇಟಿಓ ಸಂಪರ್ಕವಿರುವ, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಸ್ಥೆಗಳನ್ನು ನಿರ್ಬಂಧಿಸುವಂತೆ ಟರ್ಕಿ ಮಾಡಿರುವ ಮನವಿಯನ್ನು ಭಾರತೀಯ ಭದ್ರತಾ ಪಡೆಗಳು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಭಯೋತ್ಪಾದನೆಯ ಎಲ್ಲಾ ಆಯಾಮ ಮತ್ತು ಚಟುವಟಿಕೆಗಳು ಭಾರತ ಮತ್ತು ಟರ್ಕಿಗೆ ದೊಡ್ಡ ಸವಾಲಾಗಿದೆ. ಈ ಬಗ್ಗೆ ಉಭಯ ದೇಶಗಳು ಪರಸ್ಪರ ಮಾಹಿತಿ ವಿನಿಮಯ ಮತ್ತು ದ್ವಿಪಕ್ಷೀಯ ಸಹಕಾರಗಳನ್ನು ನಡೆಸುವುದು ಅಗತ್ಯ ಎಂದು ಕಾವ್ಸೋಗ್ಲು ಅವರು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.