ನವದೆಹಲಿ: ಭಾರತ ಸರ್ಕಾರ ಕಳೆದ ಕೆಲವು ವರ್ಷಗಳಿಂದ ಬಹಳಷ್ಟು ವೆಬ್ಸೈಟ್ಗಳು ಮತ್ತು ಯುಆರ್ಎಲ್ಗಳನ್ನು ಇಂಟರ್ನೆಟ್ ಸೇವಾದಾರರು ಅಥವಾ ಕೋರ್ಟ್ ನಿರ್ದೇಶನದಂತೆ ನಿಷೇಧಿಸಿದೆ.
ಆಗಸ್ಟ್ 2015ರಲ್ಲಿ ಸರ್ಕಾರ 170 ಆಕ್ಷೇಪಾರ್ಹ ಸೈಟ್ಗಳು ಹಾಗೂ 857 ಕಾಮಪ್ರಚೋದಕ ಕಂಟೆಂಟ್ಗಳನ್ನು ಹೊಂದಿದ್ದ ಸೈಟ್ಗಳನ್ನು ನಿಷೇಧಿಸಿತ್ತು.
ಇತ್ತೀಚೆಗೆ Torrents ವೆಬ್ಸೈಟ್ನ್ನು ನಿಷೇಧಿಸಲಾಗಿದ್ದು, ಈ ವೆಬ್ಸೈಟ್ಗಳಿಂದ ಮಾಹಿತಿ ಪಡೆಯುವುದು, ಫೈಲ್ಗಳನ್ನು ಡೌನ್ಲೋಡ್ ಮಾಡಿದಲ್ಲಿ ಅಥವಾ ಕೇವಲ ವೀಕ್ಷಿಸಿದರೂ ಅವರಿಗೆ 3 ವರ್ಷ ಜೈಲು ಹಾಗೂ 3 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.
ಸರ್ಕಾರದ ಸಂಸ್ಥೆಯ ಅನ್ವಯ ಈ Torrents URLನ್ನು ನ್ಯಾಯಾಲಯದ ಆದೆಶದ ಮೇರೆಗೆ ನಿಬಂಧಿಸಲಾಗಿದೆ. ಈ URL ಅಡಿಯಲ್ಲಿ ಯಾವುದೇ ಕಂಟೆಂಟ್ನ ನಕಲು ಪ್ರತಿ ವೀಕ್ಷಿಸುವುದು, ಡೌನ್ಲೋಡ್ ಮಾಡಿದಲ್ಲಿ ಭಾರತದ ಕಾನೂನುಗಳ ಅಡಿಯಲ್ಲಿ 1957ರ ಕೃತಿಸ್ವಾಮ್ಯ ಕಾಯಿದೆಯ ಪರಿಚ್ಛೇದ 63, 63ಎ, 65, 65ಎ ಅಡಿಯಲ್ಲಿ ಶಿಕ್ಷಾರ್ಹವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.