ರಿಯೋ : ರಿಯೋ ಒಲಿಂಪಿಕ್ಸ್ 2016 ರ ಮಹಿಳಾ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಪಿ.ವಿ. ಸಿಂಧು ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ರಚಿಸಿದ್ದಾರೆ.
ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಆಟಗಾರ್ತಿ ಮಾತ್ರವಲ್ಲದೆ ಒಲಿಂಪಿಕ್ಸ್ನಲ್ಲಿ ಇದುವರೆಗೆ ಪದಕ ಗೆದ್ದ ಭಾರತದ ಅತಿ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸಿಂಧು ಅವರು ಪಾತ್ರರಾಗಿದ್ದಾರೆ.
ಫೈನಲ್ಸ್ನಲ್ಲಿ ವಿಶ್ವ ನಂ. 1 ಆಟಗಾರ್ತಿ ಸ್ಪೇನ್ನ ಕೆರೋಲಿನಾ ಮರಿನ್ ಅವರನ್ನು ಎದುರಿಸಿದ ಸಿಂಧು 21-19, 12-21, 15-21 ರ ಮೂಲಕ ಪರಾಭವಗೊಂಡು ಬಂಗಾರದ ಪದಕದಿಂದ ವಂಚಿತರಾದರು. ಆದರೆ ಭಾರತಕ್ಕೆ ಬೆಳ್ಳಿ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
21 ವರ್ಷದಪುಸರ್ಲಾ ವೆಂಕಟ ಸಿಂಧು 1995 ರ ಜುಲೈ 1 ರಂದು ಹೈದರಾಬಾದ್ನಲ್ಲಿ ಜನಿಸಿದರು. 2012 ರಲ್ಲಿ ಚೀನಾ ಮಾಸ್ಟರ್ ಸೂಪರ್ ಸೀರೀಸ್ನಲ್ಲಿ ಒಲಿಂಪಿಕ್ ಪದಕ ವಿಜೇತ ಆಟಗಾರ್ತಿ ಲೀ ಕ್ಸೇರ್ವಿ ಅವರನ್ನು ಸೋಲಿಸಿದ ಬಳಿಕ ಸಿಂಧು ಖ್ಯಾತಿಗೆ ಬಂದರು.
2013 ರ ವಿಶ್ವಚಾಂಪಿಯನ್ನಲ್ಲಿ ಸಿಂಧು ಕಂಚು ಗೆದ್ದಿದ್ದರು. ಅವರ ಸಾಧನೆಯನ್ನು ಪರಿಗಣಿಸಿ ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಿ ಅವರಿಗೆ ಪುರಸ್ಕರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.