×
Home About Us Advertise With s Contact Us

ಗಂಗೊಳ್ಳಿ ಪ್ರಾ. ಮೀ. ಸ. ಸಂಘದ ಅಧ್ಯಕ್ಷರಾಗಿ ನಾಗ ಖಾರ್ವಿ ಅವಿರೋಧ ಆಯ್ಕೆ

BYN-Mar25-4--Naga-Kharvi-&-Rudrabhoomiಬೈಂದೂರು : ಉಡುಪಿ ಜಿಲ್ಲೆಯ ಪ್ರತಿಷ್ಠಿತ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಮುಂದಿನ ಐದು ವರ್ಷಗಳಿಗೆ ನೂತನ ಅಧ್ಯಕ್ಷರಾಗಿ ಸಂಘದ ಹಾಲಿ ಅಧ್ಯಕ್ಷ ಕೆ.ನಾಗ ಖಾರ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ಸಹಕಾರಿಯ ಸಭಾಂಗಣದಲ್ಲಿ ಜರಗಿದ ಆಯ್ಕೆ ಪ್ರಕ್ರಿಯೆಯಲ್ಲಿ ಇವರು ಅಧ್ಯಕ್ಷರಾಗಿ ಖಾರ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಗಂಗೊಳ್ಳಿ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮೋಹನ ಖಾರ್ವಿ ಮತ್ತು ಕುಂದಾಪುರ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪ್ರಕಾಶ್ ಆರ್. ಖಾರ್ವಿ ಉಮೇದುವಾರಿಕೆ ಸಲ್ಲಿಸಿದ್ದರು.

ಬಳಿಕ ಗುಪ್ತ ಮತದಾನದ ಮೂಲಕ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಪ್ರಕಾಶ್ ಆರ್.ಖಾರ್ವಿ ಅವರು ಆರು ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಅರುಣ ಕುಮಾರ್ ಎಸ್.ವಿ. ಘೋಷಿಸಿದರು. ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ 11 ಸ್ಥಾನಗಳ ಪೈಕಿ 10 ಸ್ಥಾನಗಳಿಗೆ ಮಾ.15ರಂದು ಚುನಾವಣೆ ನಡೆದಿದ್ದು, ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು.

ಸಂಘದ ನಿರ್ದೇಶಕರಾದ ವಿಘ್ನೇಶ ಖಾರ್ವಿ, ಮಾಧವ ಖಾರ್ವಿ, ಶಂಕರ ಖಾರ್ವಿ, ಸರೋಜಿನಿ, ದಿನೇಶ ಖಾರ್ವಿ, ಶಶಿಕಲಾ, ತಿಮ್ಮಪ್ಪ ಖಾರ್ವಿ, ಸುಮತಿ, ಸಂಘದ ವ್ಯವಸ್ಥಾಪಕ ಮೋಹನ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

 

 

Recent News

Back To Top
error: Content is protected !!