ನವದೆಹಲಿ: ಜಮ್ಮು, ತಿರುಪತಿ ಸೇರಿದಂತೆ ದೇಶದ ಇತರ ಭಾಗಗಳಲ್ಲಿ 6 ಹೊಸ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸ್ಥಾಪನೆಯ ಹೊಸ ಕಾನೂನಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ನೀಡಿದ್ದಾರೆ.
ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ತಿದ್ದುಪಡಿ) ಕಾಯ್ದೆ 2016ಕ್ಕೆ ಪ್ರಣಬ್ ಮುಖರ್ಜಿ ಅವರು ಒಪ್ಪಿಗೆ ನೀಡಿದ್ದು, ಕೇರಳದ ಪಾಲಕ್ಕಾಡ್, ಕರ್ನಾಟಕದ ಧಾರವಾಡ, ಛತ್ತೀಸ್ಗಢದ ಭಿಲಾಯ್, ಗೋವಾಗಳಲ್ಲಿ ಈ ಹೊಸ ಐಐಟಿ ಸ್ಥಾಪನೆಯಾಗಲಿವೆ.
ಈ ಹೊಸ ಕಾನೂನು ಧಾರವಾಡದ ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ (ಐಎಸ್ಎಂ)ನ್ನು ತನ್ನ ಪರಿಧಿಯಡಿ ತಂದಿದೆ. ಅದರಂತೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಇಂಡಿಯನ್ ಸ್ಕೂಲ್ ಆಫ್ ಮೈನ್ಸ್) ಧನ್ಬಾದ್ ಎಂದು ಕರೆಯಲಾಗುವುದು ಎಂದು ಶಾಸನ ಹೇಳಿದೆ. ಕನೂನಿನ ಪ್ರಕಾರ ಈ ಎಲ್ಲ ಸಂಸ್ಥೆಗಳು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆಯಲಿವೆ.
ಆಂಧ್ರ ಪ್ರದೇಶದಲ್ಲಿ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ಸ್ಥಾಪನೆಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.