ನವದೆಹಲಿ: ‘ನೇಪಾಳದಲ್ಲಿ ಸಂಭವಿಸಿದ ಭೀಕರ ದುರಂತಕ್ಕೆ ಭಾರತ ಶೀಘ್ರವಾಗಿ ಸ್ಪಂದಿಸಿದೆ. ವಿಷಯವನ್ನು ನನಗಿಂತಲೂ ಮೊದಲು ತಿಳಿದುಕೊಂಡ ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣವೇ ಕ್ರಮಕ್ಕೆ ಮುಂದಾದರು’ಎಂದು ಗೃಹಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಅವರು ಸೋಮವಾರ ಸಂಸತ್ತಿನಲ್ಲಿ ಭೂಕಂಪದ ಬಗ್ಗೆ ಹೇಳಿಕೆ ನೀಡಿ ‘ಗೃಹಮಂತ್ರಿಯಾಗಿ ನಾನು ಶೀಘ್ರವಾಗಿ ತೋರಿಸಬೇಕಿದ್ದ ಸ್ಪಂದನೆಯನ್ನು ಪ್ರಧಾನಿ ತೋರಿಸಿದ್ದಾರೆ’ ಎಂದರು.
‘ನೇಪಾಳದಿಂದ ಹೊರಬರಲು ಬಯಸುವ ನಾಗರಿಕರನ್ನು ವಾಪಾಸ್ ಕರೆತರುವ ವ್ಯವಸ್ಥೆ ಮಾಡುತ್ತೇವೆ. ಭೂಕಂಪದ ಬಳಿಕ 12ಕ್ಕೂ ಅಧಿಕ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದೇವೆ. ನೇಪಾಳದ ಗಡಿಯಲ್ಲಿರುವ ರಾಜ್ಯಗಳು ನೇಪಾಳಕ್ಕೆ ಬಸ್ ಕಳುಹಿಸಿ ಅಲ್ಲಿರುವ ಭಾರತೀಯರನ್ನು ವಾಪಾಸ್ ಕರೆತರಬೇಕು. ಭೂಕಂಪದಿಂದ ತೊಂದಗೀಡಾದ ನೇಪಾಳ ಮತ್ತು ಭಾರತ ಎರಡೂ ರಾಷ್ಟ್ರದ ಜನರಿಗೂ ನಮ್ಮ ಸರ್ಕಾರ ಸಹಾಯ ಮಾಡುತ್ತದೆ’ ಎಂದರು.
ಅಲ್ಲದೇ ’63 ಮಂದಿ ಬಲಿಯಾದ ಬಿಹಾರ ಮತ್ತು ಉತ್ತರಪ್ರದೇಶಕ್ಕೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳವನ್ನು ಕಳುಹಿಸಿ ಕೊಡಲಾಗಿದೆ. ನೇಪಾಳದಿಂದ 1,900 ಮಂದಿ ಭಾರತೀಯರನ್ನು ವಾಯುಸೇನೆ ರಕ್ಷಿಸಿದೆ. ವಿವಿಧ ಸಚಿವಾಲಯಗಳ ಹಲವಾರು ಮಂದಿ ಅಧಿಕಾರಿಗಳು ನೇಪಾಳಕ್ಕೆ ತೆರಳಿದ್ದಾರೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.