ಇಸ್ಲಾಮಾಬಾದ್ : ಪಾಕಿಸ್ಥಾನದಲ್ಲಿ ಮತ್ತೆ ಬಾಂಬ್ ಮೊರೆತ ಕೇಳಿದೆ. ಸೋಮವಾರ ಇಲ್ಲಿನ ಕ್ವೆಟ್ಟಾ ಪ್ರದೇಶದಲ್ಲಿನ ಸಿವಿಲ್ ಹಾಸ್ಪಿಟಲ್ನಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ. ಸ್ಫೋಟದಿಂದ ತೀವ್ರ ಸ್ವರೂಪದ ಹಾನಿಗಳಾಗಿದ್ದು 53 ಮಂದಿ ಅಸುನೀಗಿದ್ದಾರೆ. 50 ಮಂದಿಗೆ ಗಾಯಗಳಾಗಿವೆ.
ಈ ಪ್ರದೇಶದ ವಕೀಲನೊಬ್ಬನ ಹತ್ಯೆಯನ್ನು ಖಂಡಿಸಿ ಈ ದಾಳಿ ನಡೆದಿರಬೇಕು ಎಂದು ಶಂಕಿಸಲಾಗಿದೆ. ಈ ಘಟನೆಯಲ್ಲಿ ಮೃತರಾದವರು ಹೆಚ್ಚಿನವರು ವಕೀಲರು, ಪೊಲೀಸರು ಮತ್ತು ಪತ್ರಕರ್ತರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ಥಾನದಲ್ಲಿ ನಡೆದ ಭೀಕರ ಸ್ಫೋಟ ಇದಾಗಿದೆ.
ಯಾವ ಉಗ್ರ ಸಂಘಟನೆ ಈ ಕೃತ್ಯವನ್ನು ಎಸಗಿದೆ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.