ನವದೆಹಲಿ: ಕೇಂದ್ರ ರೈಲ್ವೆಯು ಮುಂದಿನ ತಿಂಗಳುಗಳಲ್ಲಿ ಮಹಿಳೆಯರ ಭದ್ರತೆ ಹೆಚ್ಚಿಸಲು 74 ರೈಲು ನಿಲ್ದಾಣಗಳಲ್ಲಿ 32 ಕೋಟಿ ರೂ. ವೆಚ್ಚದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಆದೇಶ ನೀಡಲಾಗುತ್ತಿದ್ದು, ವರ್ಷಾಂತ್ಯದೊಳಗೆ ಕಾರ್ಯ ಆರಂಭಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ನಿರ್ಭಯಾ ನಿಧಿ ಯೋಜನೆಯಡಿ ಒಟ್ಟು 1000 ರೈಲು ನಿಲ್ದಾಣಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ತಿರುಗುವ ಹಾಗೂ ಸ್ಥಿರ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಇದು ಕೇವಲ ಮಹಿಳೆಯರ ಭದ್ರತೆ ಅಷ್ಟೇ ಅಲ್ಲದೇ ಇತರ ಭದ್ರತಾ ವ್ಯವಸ್ಥೆಗಳಿಗೂ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಸಚಿವಾಲಯ ಕಾರ್ಯರೂಪಕ್ಕೆ ತರಲಿರುವ ಇಂಟಿಗ್ರೇಟೆಡ್ ಎಮರ್ಜೆಂಸಿ ರೆಸ್ಪಾನ್ಸ್ ವ್ಯವಸ್ಥೆ ನಿರ್ಭಯಾ ನಿಧಿಯ 500 ಕೋಟಿ ರೂ. ಅತಿ ದೊಡ್ಡ ಯೋಜನೆಯಾಗಿದ್ದು, 32 ಕೋಟಿ ರೂ. ಯೋಜನೆ ಇದರ ಒಂದು ಭಾಗವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.