ನ್ಯೂಯಾರ್ಕ್ : ಮಕ್ಕಳಿಗಾಗಿ ಹಿಮಾಲಯ ಪರ್ವತಗಳ 3D ಚಿತ್ರಣ, ಗೇಮಿಂಗ್ ರೂಪದಲ್ಲಿ ಅನ್ವೇಷಿಸಲು ಗೂಗಲ್ ಹೊಸ ಅಪ್ಲಿಕೇಷನ್ ಬಿಡುಗಡೆ ಮಾಡಿದೆ.
‘Verne: The Himalayas’ ಹೆಸರಿನ ಗೂಗಲ್ ಕಿಡ್ಸ್ ಮ್ಯಾಪ್ 500 ಅಡಿಯ ‘ಯೆತಿ’ಯನ್ನು ಪರಿಚಯಿಸಿದೆ. ಇದು ಮ್ಯಾಪ್ ಸೀನ್ಗಳಲ್ಲಿ ಯೆತಿಯನ್ನು ಓಡಾಡಿಸಬಹುದಾಗಿದೆ. ಈ ಆ್ಯಪ್ ಮಕ್ಕಳು 3D ಗೇಮಿಂಗ್ ರೂಪದಲ್ಲೂ ಬಳಸಬಹುದು ಎಂದು ಟೆಕ್ ಕ್ರಂಚ್ ವರದಿ ಮಾಡಿದೆ.
ಈ ಆಟದಲ್ಲಿ ಯೆತಿ (Yeti) ಮೌಂಟ್ ಎವರೆಸ್ಟ್ ಏರುತ್ತದೆ, ಹಿಮಪಾತದ ಸರೋವರಗಳಲ್ಲಿ ಸ್ಕೇಟಿಂಗ್, ಕಾಡು ಕೋಣಗಳನ್ನು ಅಟ್ಟುವುದು ಮಾಡುತ್ತದೆ. ಜೆಟ್ಪ್ಯಾಕ್ ಸವಾರಿ, ಹಿಮಾಲಯಗಳ ವಾದ್ಯಗಳನ್ನು ನುಡಿಸುವುದು, ಧ್ವನಿಯ ಮೂಲಕ ಶೈಕ್ಷಣಿಕ ಮಾಹಿತಿಗಳನ್ನು ನೀಡುತ್ತದೆ.
ಹಿಮಾಲಯ ಪರ್ವತ ಶ್ರೇಣಿಗಳ 3D ಚಿತ್ರಣಗಳಲ್ಲದೇ ಗೂಗಲ್ ಅರ್ಥ್ನ ಇತರ ಪ್ರದೇಶಗಳ 3D ಚತ್ರದೊಂದಿಗೆ ಮಕ್ಕಳ ಗೇಮಿಂಗ್ ಜಗತ್ತನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಟೆಕ್ ಕ್ರಂಚ್ ಹೇಳಿದೆ.
ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಇಂದ ‘Verne:The Himalayas’ ಆ್ಯಪ್ ಡೌನ್ಲೋಡ್ ಮಾಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.