ಕೈರೋ: ಇರಾಕ್ ಹಾಗೂ ಸಿರಿಯಾಗಳಲ್ಲಿ ತಮ್ಮ ಪ್ರದೇಶಗಳನ್ನು ಕಳೆದುಕೊಳ್ಳುತ್ತಿರುವ ಇಸಿಸ್, ಪ್ರಾನ್ಸ್ ಹಾಗೂ ಜರ್ಮನಿ ಸೇರಿದಂತೆ ಇತರ ರಾಷರಗಳ ಮೇಲೆ ಜಾಗತಿಕ ದಾಳಿ ನಡೆಸಲು ಸಂಚು ರೂಪಿಸುತ್ತಿದೆ.
ಕಳೆದ ಎರಡು ವರ್ಷಗಳಿಂದ ಸಿರಿಯಾ ಹಾಗೂ ಇರಾಕ್ ಮೇಲೆ ಅಮೇರಿಕ ಒಕ್ಕೂಟಗಳ ವಾಯು ದಾಳಿ ಹಾಗೂ ಸ್ಥಳೀಯ ಪಡೆಗಳ ಬೆಳವಣಿಗೆಗಳಿಂದ ಈ ಪ್ರದೇಶಗಳಲ್ಲಿ ಇಸಿಸ್ ತಮ್ಮ ಹತೋಟಿಯನ್ನು ಕಳೆದುಕೊಳ್ಳುತ್ತಿದೆ.
ತನ್ನ ಸ್ವಯಂಘೋಷಿತ ಖಲೀಫಗಿರಿಗೆ ಬೆಂಬಲಿಸುವಂತೆ ಒತ್ತಾಯಿಸುವ ಬದಲು ಸ್ಥಳೀಯವಾಗಿ ಯಾವುದೇ ರೀತಿಯ ಅಸ್ತ್ರ ಬಳಸಿ ಕಾರ್ಯ ನಿರ್ವಹಿಸುವಂತೆ ಅದು ಹೇಳಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳ ಸರ್ಕಾರಗಳು ಇಸಿಸ್ ಸೇರುವವರನ್ನು ತಡೆಗಟ್ಟಲು ಬಾಗಿಲು ಮುಚ್ಚುತ್ತಿದ್ದರೆ ನೀವು ‘ಜಿಹಾದ್’ ಎಂಬ ಬಾಗಿಲನ್ನು ಅವರ ವಿರುದ್ಧ ತೆರೆಯಿರಿ ಎಂದು ಮೊಹಮ್ಮದ್ ಅಲ್ ಅದ್ನಾನಿ ಅವರ ಆಡಿಯೋ ಕ್ಲಿಪ್ ವಿವರಿಸಿದೆ ಎಂದು ಮೂಲಗಳು ತಿಳಿಸಿವೆ.
ತೀವ್ರಗಾಮಿ ಅನುಯಾಯಿಗಳು ಮುಹಮ್ಮದ್ ಅದ್ನಾನಿ ಕರೆಗೆ ಪ್ರತಿಕ್ರಿಯೆಯಂತೆ ಫ್ಲಾರಿಡಾ ನೈಟ್ಕ್ಲಬ್ ಮೇಲೆ ಟ್ರಕ್ ದಾಳಿ, ಮ್ಯೂನಿಚ್ನಲ್ಲಿ ರೈಲು ದಾಳಿಗಳನ್ನು ನಡೆಸಿದೆ.
ಕೆಲವು ದುಷ್ಕರ್ಮಿಗಳು ಮಧ್ಯಪ್ರಾಚ್ಯದ ಇಸಿಸ್ ಸಂಘಟನೆಯೊಂದಿಗೆ ಸಂರ್ಕ ಹೊಂದಿದ್ದು, ಸಿರಿಯಾ ಮತ್ತು ಇರಾಕ್ಗೆ ತೆರಳಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕೆಲವು ತೀವ್ರಗಾಮಿಗಳು ಘೋರ ಕೃತ್ಯಗಳನ್ನು ನಡೆಸಲು ಪ್ರಯತ್ನಿಸುತ್ತಿದ್ದು, ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ.
ಇಸಿಸ್ನ ಪ್ರಯತ್ನಗಳು ವಿಫಲವಾಗುತ್ತಿದ್ದು, ಸಿರಿಯಾ, ಇರಾಕ್ಗೆ ಬಾರದೇ ಸ್ಥಳೀಯವಾಗಿ ದೌರ್ಜನ್ಯ, ಗಲಭೆ ಎಬ್ಬಿಸಲು ಮತ್ತು ಇತರ ಬೇರೆ ರಾಷ್ಟ್ರಗಳಿಗೆ ತೆರಳಲು ಅದು ತನ್ನ ಬೆಂಬಲಿಗರಿಗೆ ಹೇಳಿದೆ ಎಂದು ತೀವ್ರಗಾಮಿಗಳ ಮೇಲಿನ ಅಧ್ಯಯನ ನಡಸುತ್ತಿರುವ ನಾರ್ತ್ಈಸ್ಟರ್ನ್ ವಿಶ್ವವಿದ್ಯಾಲಯದ ಪ್ರೊ. ಮ್ಯಾಕ್ಸ್ ಅಬ್ಹಾಮ್ಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.