ವಾಷಿಂಗ್ಟನ್: ಇತ್ತೀಚೆಗೆ ಅಮೇರಿಕಾದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಹಿಲರಿ ಕ್ಲಿಂಟನ್ ಅವರ ಇಮೇಲ್ಗಳನ್ನು ಹ್ಯಾಕ್ ಮಾಡುವಂತೆ ರಷ್ಯಾಗೆ ಕರೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದು ಅಮೇರಿಕಾದ ರಾಷ್ಟ್ರೀಯ ಭದ್ರತೆಯ ಮಾಹಿತಿಗಳು ಮತ್ತು ಮೂಲಸೌಕರ್ಯ ಭದ್ರತೆ ಕಾಯ್ದೆ ಕೆಡವುವಂತೆ ಪ್ರೇರೇಪಿಸಲಾಗುತ್ತಿದೆ ಎಂದು ಅಂದಾಜಿಸಲಾಗಿತ್ತು.
ಆದರೆ ವಾಸ್ತವವಾಗಿ ಮತ್ತೊಂದೆಡೆಯಲ್ಲಿ ಅಮೇರಿಕಾದ ಜಲಾಂತರ್ಗಾಮಿ ನೌಕೆಗಳು ಸೈಬರ್ ತಂತ್ರದ ಒಂದು ಪ್ರಮುಖ ಘಟಕವನ್ನು ಪ್ರತಿನಿಧಿಸುತ್ತದೆ. ಅಮೇರಿಕಾ ಭದ್ರತೆಗಳು ತಮ್ಮನ್ನು ಮತ್ತು ದೇಶವನ್ನು ಡಿಜಿಟಲ್ ದಾಳಿಯಿಂದ ರಕ್ಷಿಸಲು ರಕ್ಷಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕುತೂಹಲಕಾರಿ ವಿಚಾರವೆಂದರೆ ಅಮೇರಿಕಾ ಇತರ ರಾಷ್ಟ್ರಗಳ ಮೇಲೆ ಸೈಬರ್ ದಾಳಿ ನಡೆವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅಮೇರಿಕಾದ ನೌಕಾಪಡೆ ಅಧಿಕಾರಿಗಳು ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.
ಅಮೇರಿಕಾ ಎದುರಾಳಿಗಳ ಮೇಲೆ ಮೇಲುಗೈ ಸಾಧಿಸಲು ‘ಸೈಲೆಂಟ್ ಸರ್ವೀಸ್’ ಎಂದು ಕರೆಯಲಾಗುವ ಮಾಹಿತಿ ತಂತ್ರಜ್ಞಾನ ಬಳಕೆ ಒಂದು ಸುದೀರ್ಘ ಇತಿಹಾಸವೇ ಇದೆ. 1970ರಲ್ಲಿ ಅಮೇರಿಕಾ ಸರ್ಕಾರ ಅಂತರ್ಜಲ ಸಂಪರ್ಕ ಕೇಬಲ್ಗಳ ಮೂಲಕ ರಷ್ಯಾದ ಭದ್ರತಾ ಪಡೆಗಳ ಮಾಹಿತಿಗಳನ್ನು ರೆಕಾರ್ಡ್ ಮಾಡಿತ್ತು.
ಇತ್ತೀಚಿನ ದಿನಗಳಲ್ಲಿ ಅಮೇರಿಕಾದ ನೌಕೆಗಳು ಅತ್ಯಾಧುನಿಕ ಆಂಟೆನಾಗಳನ್ನು ಹೊಂದಿದ್ದು, ದುರ್ಬಲ ಅಥವಾ ಗೂಢಲಿಪಿ ಇಲ್ಲದ (ಎನ್ಕ್ರಿಪ್ಷನ್) ಜನರ ಮಾಹಿತಿಗಳನ್ನು ಕದಿಯುತ್ತಿದೆ. ಇನ್ನು ಕೆಲವು ನೌಕೆಗಳು ಅಂತರ್ಜಲ ಡ್ರೋನ್ಗಳನ್ನು ಹೊಂದಿದ್ದು, ಸಮುದ್ರ ತೀರದ ಬಹು ದೂರದಿಂದಲೇ ಇತರ ಹಡಗುಗಳನ್ನು ತಡೆಗಟ್ಟುವ ಅಥವಾ ಹ್ಯಾಕ್ ಮಾಡಲು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.