ಫಿಲಿಡೆಲ್ಫಿಯಾ : ಅಮೇರಿಕಾದಲ್ಲಿನ ಫಿಲಿಡೆಲ್ಫಿಯಾದಲ್ಲಿ ನಡೆಯಲಿರುವ ಡೆಮಾಕ್ರಟಿಕ್ ನ್ಯಾಷನಲ್ ಕನ್ವೆಷನ್ಗೆ ಭಾರತೀಯ ಮೂಲದ ಅತಿ ಕಿರಿಯ ಬಾಲಕಿಯೊಬ್ಬಳು ಅತಿಥಿಯಾಗಿ ಭಾಗವಹಿಸುತ್ತಿದ್ದಾಳೆ.
ಹಿಲರಿ ಕ್ಲಿಂಟನ್ ಅವರನ್ನು ಡೆಮಾಕ್ರಟಿಕ್ ಪಕ್ಷ ಈಗಾಗಲೇ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.
ಸೇಡಾರ್ ರ್ಯಾಪಿಡ್ಸ್ನ ಶ್ರುತಿ ಪಳನಿಯಪ್ಪನ್ ಡೆಮಾಕ್ರಟಿಕ್ ಪಕ್ಷ ನಡೆಸುತ್ತಿರುವ ಅಧಿವೇಶನದಲ್ಲಿ ಭಾಗವಹಿಸುತ್ತಿರುವ ಅತಿ ಕಿರಿಯ ವ್ಯಕ್ತಿ. ಈಕೆ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯಾಗಿದ್ದು ಹಿಲರಿಯವರ ಅತಿ ದೊಡ್ಡ ಅಭಿಮಾನಿಯಾಗಿದ್ದಾಳೆ.
ಶ್ರುತಿ ಅವರ ತಂದೆ ಪಳನಿಯಪ್ಪನ್ ಅಂಡಿಯಪ್ಪನ್ ಕೂಡಾ ಕ್ರೆಡೆನ್ಷಿಯಲ್ ಸಮಿತಿ ಸದಸ್ಯರಾಗಿ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ.
ಅತಿ ಕಿರಿಯವಳಾದ ಶ್ರುತಿ ಮತ್ತು ೧೦೨ ವರ್ಷದ ಆರಿಜೋನಾ ಮೂಲದ ಹಿರಿಯ ಅತಿಥಿ ಜೆರ್ರಿ ಎಮೆಟ್ ಈ ಅಧಿವೇಶನದ ಮುಖ್ಯ ಆಕರ್ಷಣೆಯಾಗಿದ್ದಾರೆ.
ರೋಲ್ಕಾಲ್ ವೋಟ್ ಸಂದರ್ಭದಲ್ಲಿ ಅಯೋವಾವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆಯುವ ಮೂಲಕ ಶ್ರುತಿ ಮಂಗಳವಾರ ಇತಿಹಾಸ ನಿರ್ಮಿಸಿದ್ದಳು.
ತನಗೆ ಈ ಅವಕಾಶ ನೀಡಿದ್ದ ಡೆಮಾಕ್ರಟಿಕ್ ಪಕ್ಷಕ್ಕೆ ಆಕೆ ಧನ್ಯವಾದ ತಿಳಿಸಿದ್ದಾಳೆ.
ಅಲ್ಲದೆ ಹಿಲರಿ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.