ದಿ ಹೇಗ್ : ಎರಡು ಸೆಟ್ಲೈಟ್ ಹಾಗೂ ಸ್ಪೆಕ್ಟ್ರಂಗಳ ಒಪ್ಪಂದವನ್ನು ರದ್ದುಪಡಿಸಿದ ಬಗೆಗಿನ ಅತೀ ದೊಡ್ಡ ಪ್ರಕರಣವೊಂದರಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ. ಈ ಮೂಲಕ 1 ಬಿಲಿಯನ್ ಡಾಲರ್ ನಷ್ಟವನ್ನು ತುಂಬುವ ಹೊರೆ ಭಾರತದ ಮೇಲೆ ಬಂದಿದೆ.
ಇಸ್ರೋ ಒಡೆತನದ ಆಂಥ್ರಿಕ್ಸ್ ಉದ್ಯಮದಲ್ಲಿ ಎರಡು ಸೆಟ್ಲೈಟ್ ಹಾಗೂ ಸ್ಪೆಕ್ಟ್ರಂಗಳ ಒಪ್ಪಂದವನ್ನು ಬೆಂಗಳೂರು ಮೂಲದ ದೆವಾಸ್ ಮಲ್ಟಿಮೀಡಿಯಾದೊಂದಿಗೆ ಮಾಡಿಕೊಂಡಿತ್ತು. ಆದರೆ ಬಳಿಕ ಅದನ್ನು ರದ್ದುಪಡಿಸಿತ್ತು. ಈ ಒಪ್ಪಂದದಲ್ಲಿ ಸಮಸ್ಯೆ ತಲೆದೋರಿದ ವಿಷಯವನ್ನು ಈ ಸಂಸ್ಥೆಯು ಹೇಗ್ನ ಇಂಟರ್ನ್ಯಾಷನಲ್ ಟ್ರಿಬ್ಯೂನಲ್ನಲ್ಲಿ ಇಸ್ರೋ ವಿರುದ್ಧ ಪ್ರಕರಣ ದಾಖಲಿಸಿತ್ತು.
ಇದೀಗ ಪ್ರಕರಣದ ತೀರ್ಪು ಹೊರಬಿದ್ದಿದ್ದು ಭಾರತಕ್ಕೆ ಹಿನ್ನಡೆಯಾಗಿದೆ. ಇದು ಭಾರತದ ಪ್ರತಿಷ್ಠೆಯನ್ನು ಅಂತಾರಾಷ್ಟ್ರೀಯ ಬಂಡವಾಳದಾರರ ಮುಂದೆ ಕುಗ್ಗಿಸುವ ಭೀತಿಯೂ ಎದುರಾಗಿದೆ.
ಈ ಪ್ರಕರಣದಲ್ಲಿ ಭಾರತ ಸರ್ಕಾರ ನ್ಯಾಯಸಮ್ಮತವಾಗಿ ನಡೆದುಕೊಂಡಿಲ್ಲ ಎಂದು ಟ್ರಿಬ್ಯೂನಲ್ ಅಭಿಪ್ರಾಯಪಟ್ಟಿದೆ. ಅಲ್ಲದೆ 1 ಬಿಲಿಯನ್ ಡಾಲರ್ ದಂಡವನ್ನು ಕಟ್ಟುವಂತೆ ಆದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.