ನವದೆಹಲಿ : ಸರಕಾರದಿಂದ 1 ಕೋಟಿಗೂ ಅನುದಾನ, ವಿದೇಶದಿಂದ 10 ಲಕ್ಷ ದೇಣಿಗೆ ಸ್ವೀಕರಿಸುವ ಎನ್ಜಿಓಗಳು ಮತ್ತು ಅದರ ಅಧಿಕಾರಿಗಳನ್ನು ಇನ್ನು ಮುಂದೆ ಸಾರ್ವಜನಿಕರ ಸೇವಕರು ಎಂದು ಪರಿಗಣಿಸಲಾಗುತ್ತದೆ.
ಹೀಗಾಗಿ ಇನ್ನು ಮುಂದೆ ಇಂತಹ ಎನ್ಜಿಓಗಳು ಮತ್ತು ಅದರ ಮುಖ್ಯಸ್ಥರುಗಳು ತಮ್ಮ ಹಾಗೂ ತಮ್ಮ ಸಂಗಾತಿ, ಮಕ್ಕಳ ಆಸ್ತಿ ವಿವರ, ಅದರ ಮೌಲ್ಯಗಳನ್ನು ಜುಲೈ 31 ರೊಳಗೆ ಬಹಿರಂಗಗೊಳಿಸುವುದು ಕಡ್ಡಾಯವಾಗಿದೆ.
ಎನ್ಜಿಓಗಳನ್ನು ಲೋಕಪಾಲ ಮತ್ತು ರಾಷ್ಟ್ರೀಯ ಲೋಕಾಯುಕ್ತ ಆಧೀನಕ್ಕೆ ಒಳಪಡಿಸುವ ಉದ್ದೇಶದಿಂದ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಎಲ್ಲಾ ಸಾರ್ವಜನಿಕ ಸೇವಕರು ತಮ್ಮ ಹಾಗೂ ತಮ್ಮ ಸಂಗಾತಿ ಮಕ್ಕಳ ಆಸ್ತಿ ವಿವರಗಳನ್ನು ಸಾರ್ವಜನಿಕಗೊಳಿಸಬೇಕೆಂಬುದು ಲೋಕಪಾಲ ಕಾನೂನಿನ ನಿಯಮವಾಗಿದೆ.
ಎನ್ಜಿಓಗಳ ನಿರ್ದೇಶಕರು, ಮ್ಯಾನೇಜರ್ಗಳು, ಕಾರ್ಯದರ್ಶಿಗಳು, ಅಧಿಕಾರಿಗಳು, ಈ ನಿಯಮಕ್ಕೆ ಒಳಪಡಲಿದ್ದಾರೆ.
ಸಣ್ಣ ಅಥವಾ ದೊಡ್ಡ ಪ್ರಮಾಣದ ಸರಕಾರದ ಹಣಕಾಸು ನೆರವು ಇದ್ದಲ್ಲಿ ಅಥವಾ ಆರ್ಥಿಕ ವಾರ್ಷಿಕ ಅದಾಯ 1 ಕೋಟಿಗೂ ಮಿಗಿಲಾಗಿದ್ದ ಪಕ್ಷದಲ್ಲಿ ಈ ನಿಯಮ ಒಳಪಡಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸರ್ಕಾರದ ಈ ಕ್ರಮಕ್ಕೆ ಎನ್ಜಿಓಗಳಿಂದ ವಿರೋಧ ವ್ಯಕ್ತವಾಗಿದ್ದು, ಈ ಬಗ್ಗೆ ಸರ್ಕಾರದ ಮನವೊಲಿಸಲು ಮತ್ತು ಕಾನೂನು ಸಮರ ನಡೆಸಲು ತಯಾರಿ ನಡೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.