ನವದೆಹಲಿ: ಇಸಿಸ್ ಉಗ್ರ ಸಂಘಟನೆ ಭಾರತದಲ್ಲಿ ನಡೆಸಲು ಉದ್ದೇಶಿಸಿದ್ದ ಆಘಾತಕಾರಿ ಕೃತ್ಯಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ ಒಂದೊಂದೇ ಮಾಹಿತಿಗಳನ್ನು ಹೊರಗೆಡವುತ್ತಿದೆ.
ಇತ್ತೀಚಿಗೆ ಹರಿದ್ವಾರದಲ್ಲಿ ನಡೆದ ಅರ್ಧಕುಂಭ ಮೇಳದ ವೇಳೆ ದಾಳಿಗಳನ್ನು ನಡೆಸಲು ಇಸಿಸ್ ಸಂಚು ರೂಪಿಸಿತ್ತು ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಬಂಧಿತರಾಗಿರುವ ಆರು ಮಂದಿ ಶಂಕಿತ ಉಗ್ರರು ತನಿಖೆಯ ವೇಳೆ ಈ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ. ಇವರ ವಿರುದ್ಧ ಸೋಮವಾರ ಚಾರ್ಜ್ಶೀಟ್ನ್ನೂ ದಾಖಲು ಮಾಡಲಾಗಿದೆ. ಇವರು ಬಾಯ್ಬಿಟ್ಟ ಅಂಶಗಳನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಇಸಿಸ್ ಸಿದ್ಧಾಂತಗಳಿಂದ ಪ್ರೇರಿತರಾಗಿದ್ದ ಈ ಯುವಕರು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಬಯಸಿದ್ದರು, ಅಲ್ಲದೇ ಇತರ ಯುವಕರನ್ನು ಇಸಿಸ್ ಸೇರುವಂತೆ ಪ್ರೇರಿಪಿಸುತ್ತಿದ್ದರು ಎಂದು ಎನ್ಐಎ ಆರೋಪ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.