ನ್ಯೂಯಾರ್ಕ್: ವಿಡಿಯೋ ಗೇಮ್ ಒಂದರಲ್ಲಿ ಕಾಳಿ ದೇವಿಯ ಚಿತ್ರಣವನ್ನು ರೂಪಿಸಿದ್ದರ ಕುರಿತು ನ್ಯೂಯಾರ್ಕ್ನ ರಾಜನ್ ಝೆದ್ ಅವರು ವಿಡಿಯೋ ಗೇಮ್ ತಯಾರಿಕಾ ಕಂಪನಿಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಳಿ ದೇವಿ ಹಿಂದೂಗಳ ಆರಾಧ್ಯ ದೇವತೆ. ಕಾಳಿ ದೇವಿಯ ಪ್ರತಿರೂಪದ ಚಿತ್ರಣವನ್ನು ಓವರ್ ವಾಚ್ ವಿಡಿಯೋ ಗೇಮ್ನಲ್ಲಿ ರೂಪಿಸಿರುವುದಕ್ಕೆ ಅಮೆರಿಕದ ಕಂಪನಿ ಬ್ಲಿಜಾರ್ಡ್ ವಿರುದ್ಧ ಯೂನಿವರ್ಸಲ್ ಸೊಸೈಟ್ ಆಫ್ ಹಿಂದೂಯಿಸಂ ಮುಖ್ಯಸ್ಥ ರಾಜನ್ ಝೆದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಗೇಮ್ನಲ್ಲಿ ದೇವಿ ಚಿತ್ರಣದ ನೀಲಿ ಬಣ್ಣಕ್ಕೆ ದೇವಿ ಎಂದು ಹೆಸರು ನೀಡಲಾಗಿದೆ. ಇದು ನಿಜವಾಗಿ ದೇವಿಯ ಗುಣ ವಿಶೇಷಗಳನ್ನು ಪ್ರತಿನಿಧಿಸುವುದಿಲ್ಲ. ದೇವಿ ಚಿತ್ರಣವನ್ನು ಸ್ವಲ್ಪ ಮಾದಕತೆಯ ರೂಪದಲ್ಲೂ ಚಿತ್ರಿಸಲಾಗಿದೆ. ಇದು ಕೂಡಾ ಅಷ್ಟು ಸರಿ ಅಲ್ಲ. ದೇವಿಯನ್ನು ಆರಾಧಿಸುವವರು ಹಿಂದೂಗಳು. ಈ ವಿಡಿಯೋ ಗೇಮ್ನಲ್ಲಿ ಆಟಗಾರರು ದೇವಿಯ ಚಲನೆಯನ್ನು ನಿಯಂತ್ರಣದಲ್ಲಿಡುತ್ತಾರೆ. ಕೈ ಬೆರಳ ತುದಿಯಲ್ಲಿ ದೇವಿಯ ಚಲನೆಯನ್ನು ನಿರ್ಧರಿಸುವುದು ಸರಿಯೇ ? ವಾಸ್ತವದಲ್ಲಿ ದೇವಿ ನಮ್ಮ ಮುಂದಿನ ನಡೆಯನ್ನು ನಿರ್ಧರಿಸುತ್ತಾಳೆ. ಇಂತಹುದರಲ್ಲಿ ನಾವು ಹೇಗೆ ವಿಡಿಯೋ ಗೇಮ್ನಲ್ಲಿ ದೇವಿಯ ಚಲನೆಯನ್ನು ನಿರ್ಧರಿಸಲಾಗುತ್ತದೆ. ಗೇಮ್ಗಳು ಮನಸ್ಸಿಗೆ ಮುದ ನೀಡುವಂತೆ ಇರಬೇಕು. ಆದರೆ ಅದರಲ್ಲಿ ಪಾತ್ರಗಳನ್ನು ಬಳಸುವಾಗ ಎಚ್ಚರಿಕೆ ಇರಬೇಕು. ಯಾವುದೇ ಧರ್ಮವಿರಬಹುದು ಭಾವನೆಗಳಿಗೆ ಧಕ್ಕೆ ತರುವಂತಹ ಸನ್ನಿವೇಶಗಳು, ಪಾತ್ರಗಳ ಚಿತ್ರಣಗಳು ಇರಬಾರದು. ಇದು ಸರಿಯಲ್ಲ ಎಂದು ರಾಜನ್ ಆಕ್ಷೇಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.