ಇಸ್ಲಾಮಾಬಾದ್: ಜುಲೈ 20ರಂದು ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳನ್ನು ಖಂಡಿಸಿ ಕಪ್ಪು ದಿನವನ್ನು ಆಚರಿಸಲು ನಿರ್ಧರಿಸಿರುವ ಪಾಕಿಸ್ಥಾನ, ಮಂಗಳವಾರ ‘ಕಾಶ್ಮೀರ್ ಎಕ್ಸೆಷನ್’ ದಿನವನ್ನು ಆಚರಿಸುತ್ತಿದೆ.
ಕಾಶ್ಮೀರ ಜನತೆಯೊಂದಿಗೆ ನಾವಿದ್ದೇವೆ ಎಂಬುದನ್ನು ತೋರಿಸುವ ಸಲುವಾಗಿ ಕಪ್ಪು ದಿನವನ್ನು ಆಚರಿಸಲಾಗುತ್ತಿದೆ ಎಂದು ಅಲ್ಲಿನ ಪ್ರಧಾನಿ ನವಾಝ್ ಶರೀಫ್ ಹೇಳಿಕೊಂಡಿದ್ದಾರೆ.
ಭಾರತೀಯ ಸೇನೆ ಕಾಶ್ಮೀರದ ಜನತೆಯ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂಬುದು ಪಾಕ್ ಆರೋಪವಾಗಿದೆ. ಉಗ್ರ, ಹಿಜ್ಬುಲ್ ಮುಖಂಡ ಬುರ್ಹಾನ್ ವಾನಿ ಹತ್ಯೆಯ ಬಳಿಕ ಪಾಕ್ ಕಪ್ಪು ದಿನ ಆಚರಣೆಯ ಬಗ್ಗೆ ಘೋಷಣೆ ಮಾಡಿತ್ತು.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಭಾರತ, ಭಾರತದ ಆಂತರಿಕ ವಿಷಯದಲ್ಲಿ ಪಾಕ್ಗೆ ತಲೆ ಹಾಕದಂತೆ ಎಚ್ಚರಿಕೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.