ಶ್ರೀನಗರ : ಯಾತ್ರೆ ಅಂತ್ಯಗೊಳ್ಳುವ 30 ದಿನಗಳ ಮೊದಲೇ ಅಮರನಾಥದಲ್ಲಿನ ಶಿವಲಿಂಗ ಸಂಪೂರ್ಣ ಕರಗಿದೆ. ಇದು ಸಾವಿರಾರು ಯಾತ್ರಾರ್ಥಿಗಳ ಬೇಸರಕ್ಕೆ ಕಾರಣವಾಗಿದೆ.
ಜುಲೈ 2 ರಂದು ಯಾತ್ರೆ ಆರಂಭಗೊಂಡಿದ್ದು, ರಕ್ಷಾಬಂಧನದ ದಿನವಾದ ಆಗಸ್ಟ್ 18 ರಂದು ಅಂತ್ಯಗೊಳ್ಳಲಿದೆ.
ಹಿಜ್ಬುಲ್ ನಾಯಕ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಯಾತ್ರೆಗೆ ತೀವ್ರ ಅಡೆತಡೆ ಉಂಟಾಗಿದೆ. ಕಣಿವೆ ರಾಜ್ಯದಲ್ಲಿ ಭುಗಿಲೆದ್ದಿರುವ ನಿರಂತರ ಹಿಂಸಾಚಾರದಿಂದಾಗಿ ಯಾತ್ರೆಯನ್ನು ಪದೇ ಪದೇ ಸ್ಥಗಿತಗೊಳಿಸಲಾಗುತ್ತಿದೆ.
ಸಮುದ್ರಮಟ್ಟದಿಂದ 3818 ಮೀಟರ್ ಎತ್ತರದಲ್ಲಿರುವ ಈ ಗುಹೆ ದೇವಾಲಯಕ್ಕೆ ಇದುವರೆಗೆ 1,45,000 ಯಾತ್ರಾರ್ಥಿಗಳು ಭೇಟಿ ಕೊಟ್ಟಿದ್ದಾರೆ.
ಹಿಂಸಾಚಾರ ಕಣಿವೆ ರಾಜ್ಯದಲ್ಲಿ ತಾಂಡವವಾಡುತ್ತಿದ್ದರೂ ಯಾವೊಬ್ಬ ಯಾತ್ರಾರ್ಥಿಯ ಮೇಲೆ ಇದುವರೆಗೆ ದಾಳಿಗಳಾಗಿಲ್ಲ. ಶ್ರೀನಗರ ರಾಷ್ಟ್ರೀಯ ಹೈವೇ ಬಳಿ ಸ್ಥಳೀಯ ಮುಸ್ಲಿಂ ಯುವಕರು ಕರ್ಫ್ಯೂ ನಿರ್ಬಂಧವನ್ನೂ ಮೀರಿ 20 ಅಮರನಾಥ ಯಾತ್ರಾರ್ಥಿಗಳನ್ನು ರಕ್ಷಿಸಿದ್ದಾರೆ ಎಂಬುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.