ಕಳೆದ ಎರಡು ದಶಕಗಳಿಂದ ಪೂನಮ್ ಹಾಗೂ ನರೇಶ್ ತಮ್ಮ ಏಕೈಕ ಪುತ್ರಿ ಅದಿತಿ ಎದುರಿಸುತ್ತಿರುವ ಪ್ಯಾರನಾಡ್ ಶಿಝೋಫ್ರೀನಿಯಾ (ಒಂದು ರೀತಿಯ ಮಾನಸಿಕ ರೋಗ) ಕುರಿತು ಚಿಂತಿತರಾಗಿದ್ದಾರೆ.
ಬಾಲ್ಯದಲ್ಲಿ ಕೇವಲ ಒಬ್ಬರು, ಇಬ್ಬರಲ್ಲಿ ಮಾತ್ರ ಗೆಳೆತನ ಇಟ್ಟುಕೊಂಡಿದ್ದ ಅದಿತಿಗೆ ತನ್ನ ಹದಿಹರೆಯದಲ್ಲಿ ಮಾನಸಿಕ ರೋಗದ ಚಿಹ್ನೆಗಳು ಕಂಡುಬಂದವು. ಅದಿತಿಗೆ ಶಾಲೆಯಲ್ಲಿ ಸ್ನೇಹಿತರು ತನ್ನ ವಿರುದ್ಧ ಸಂಚು ರೂಪಿಸುತ್ತಿರುವಂತೆ ಭಾಸವಾಗತೊಡಗಿತು.
ಸಮೀಪದ ಕಿರಾಣಿ ಅಂಗಡಿಯವನು ತನಗೆ ಅಮಲಿನ ಮದ್ದು ಚುಚ್ಚುವನೆಂದು ದೂರು ನೀಡುತ್ತಿದ್ದ ಅದಿತಿ, ತಾನು ಒಂದು ಉಗ್ರ ಸಂಘಟನೆಗೆ ಮಾಹಿತಿ ಸೋರಿಕೆ ಮಾಡುತ್ತಿರುವುದು ಅರಿವಾಯಿತು. ಕಾಲ ಕಳೆಯುತ್ತಿದ್ದಂತೆ ಆಕೆಯ ಭ್ರಮೆಯ ಆವರ್ತನ ಹೆಚ್ಚತೊಡಗಿದ್ದು, ಪೋಷಕರು ಚಿಕಿತ್ಸೆ ನೀಡಲು ಕಷ್ಟಪಡಬೇಕಾಯಿತು.
ಇದುವರೆಗೂ ಆಕೆಯ ಮಾನಸಿಕ ಪರಿಸ್ಥಿತಿ ಸರಿಯಾಗಿಲ್ಲ. ಇದಕ್ಕೆ ಕಾರಣ ಮಾನಸಿಕ ರೋಗಿಗಳಿಗೆ ಸಿಗುವ ಸರ್ಕಾರದ ಸವಲತ್ತುಗಳಾಗಿರಬಹುದು ಅಥವಾ ಆರ್ಥಿಕ ಪರಿಸ್ಥಿತಿಯು ಕಾರಣವಿರಬಹುದು. ಈ ನಿಟ್ಟಿನಲ್ಲಿ ಭಾರತದಲ್ಲಿ ಮಾನಸಿಕ ಅಸ್ವಸ್ಥರಿಗೆ ದೊರೆಯುತ್ತಿರುವ ನೆರವು ಬಹಳ ಕಡಿಮೆ. ಇಂತಹ ಅದೆಷ್ಟೋ ಜನರು ಇಂತಹ ಕಾರಣಗಳಿಂದಾಗಿ ನಿರ್ಗತಿಕರೂ ಆಗುತ್ತಿದ್ದಾರೆ.
ಮಾನಸಿಕ ಆರೋಗ್ಯ ಚಿಕಿತ್ಸೆಗೆ ನೆರವು ನೀಡುವಲ್ಲಿ ಭಾರತ ಬಹಳಷ್ಟು ಹಿಂದುಳಿದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನಸಿಕ ಆರೋಗ್ಯ ನಕ್ಷೆ 2011ರ ಪ್ರಕಾರ ಮಾನಸಿಕ ಆರೋಗ್ಯದ ಸುಧಾರಣೆಗೆ ಭಾರತ ತನ್ನ ಆರೋಗ್ಯ ಬಜೆಟ್ನ ಶೇ.0.6ರಷ್ಟು ಮಾತ್ರ ವ್ಯಯ ಮಾಡುತ್ತಿದೆ.
ದಿವ್ಯಾಂಗ ಕಾಯಿದೆ 1995 ಸಮಾನ ಅವಕಾಶ, ಹಕ್ಕುಗಳ ರಕ್ಷಣೆ ಮತ್ತು ದಿವ್ಯಾಂಗರ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುವ ವಿವಿಧ ನೆರವು ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಒಳಗೊಂಡಿದೆ. ನಮ್ಮ ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಮಾನಸಿಕ ರೋಗಿಗಳ ಮಾನವ ಹಕ್ಕುಗಳನ್ನು ನಿರ್ಲಕ್ಷಿಸುತ್ತಿದೆ.
Math et.al. (2011) ಪ್ರಕಾರ ದಿವ್ಯಾಂಗ ರೋಗಿಗಳಿಗಿಂತ ಮಾನಸಿಕ ರೋಗಿಗಳು ಹೆಚ್ಚು ತಾರತಮ್ಯ ಎದುರಿಸುತ್ತಿದ್ದಾರೆ. ದಿವ್ಯಾಂಗ ಕಾಯಿದೆ ಮಾನಸಿಕ ರೋಗಿಗಳಿಗೆ ಯಾವುದೇ ವಿಶೇಷ ಮೀಸಲಾತಿಯನ್ನು ಹೊಂದಿಲ್ಲ.
ದಿವ್ಯಾಂಗರು ಹಾಗೂ ಮಾನಸಿಕ ರೋಗಿಗಳು ವಿಶೇಷ ಲಾಭಗಳನ್ನು ಪಡೆಯಬೇಕಿದ್ದಲ್ಲಿ ದಿವ್ಯಾಂಗ ಪ್ರಮಾಣಪತ್ರ ಹೊಂದಿರಬೇಕು. ಇನೊಂದು ಪ್ರಮುಖ ಸಮಸ್ಯೆ ಎಂದರೆ ಅಸಮರ್ಥ ದಿವ್ಯಾಂಗರು ಮತ್ತು ಅವರ ಪೋಷಣೆ ಮಾಡುವವರ ಬಗ್ಗೆ ಹೆಚ್ಚಿನ ಜಾಗೃತಿ ವಹಿಸದಿರುವುದು.
2014ರಲ್ಲಿ ಭಾರತ ಮಾನಸಿಕ ಆರೋಗ್ಯ ಕಾಯಿದೆ 1987ನ್ನು ಪರಿಷ್ಕರಿಸುವ ಮೊಟ್ಟಮೊದಲ ಬಿಲ್ ಪ್ರಸ್ತಾಪಿಸಿತ್ತು. ಆದರೆ ಅದು ಇನ್ನೂ ಶಾಸನದಲ್ಲಿ ಉಳಿದುಕೊಂಡಿದೆ.
ಕಳೆದ ವರ್ಷಅಮೇರಿಕಾ ಅಚೀವಿಂಗ್ ಅ ಬೆಟರ್ ಲೈಫ್ ಎಕ್ಸ್ಪೀರಿಯನ್ಸ್ ಕಾಯಿದೆಯನ್ನು ಜಾರಿಗೊಳಿಸಿದ್ದು, ಮಾನಸಿಕ ಅಸ್ವಸ್ಥರ ಕುಟುಂಬಗಳು ತೆರಿಗೆ ಮುಕ್ತರಾಗಲಿದ್ದು, ಸರ್ಕಾರದ ಎಲ್ಲ ಲಾಭಗಳನ್ನು ಪಡೆಯಬಹುದಾಗಿದೆ.
ಮಾನಸಿಕ ಆಸ್ಪತ್ರೆಯ ಕುರಿತು ಭಾರತ ಇನ್ನಾದರೂ ಸುಧಾರಣೆ ಕುರಿತು ಭಾರತ ಬದಲಾವನೆಯನ್ನು ತರಬೇಕಾಗಿದೆ.
ಮುಂಬಯಿಯ ‘ಸಿಲ್ವರ್ ಲೈನಿಂಗ್’ ಸಂಸ್ಥೆಯ ಓರ್ವ ಸಲಹೇಗಾರ್ತಿ ಹಾಗೂ ಮನಶಾಸ್ತ್ರಜ್ಞೆ ಈ ವಿಚಾರವನ್ನು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.