ನವದೆಹಲಿ: ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ ಆರಂಭಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸುಮಾರು 400 ಮನವಿಪತ್ರಗಳು ಬಂದಿದ್ದು, ಇದರಲ್ಲಿ 275 ಘಟಕಗಳ ಸ್ಥಾಪನೆಗೆ ಈಗಾಗಲೇ ಕೇಂದ್ರ ಸಚಿವಾಲಯ ಸಮ್ಮತಿಸಿದೆ.
ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಇದರ ಉಸ್ತುವಾರಿ ಕೈಗೊಂಡಿದ್ದು, ಪಿಪಿಪಿ ಮಾದರಿಯಲ್ಲಿ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆ ಅಡಿ ಡಯಾಲಿಸಿಸ್ ಘಟಕ ಸ್ಥಾಪನೆಗೆ ರಾಜ್ಯಗಳಿಂದ ಪ್ರಸ್ತಾಪಗಳು ಬರುತ್ತಿದ್ದು, ಬಜೆಟ್ನಲ್ಲಿ ಘಟಕ ಸ್ಥಾಪನೆಗೆ 700 ಕೋಟಿ ರೂ.ಯಿಂದ 19,000 ಕೋಟಿಗೆ ಏರಿಕೆ ಮಾಡಲಾಗಿದೆ.
ಪ್ರತಿ ಜಿಲ್ಲೆಗೆ ಒಂದು ಘಟಕ ಸ್ಥಾಪಿಸುವುದು ಬಜೆಟ್ನ ಯೋಜನೆಯಾಗಿದ್ದು, ಘಟಕಗಳು ಸ್ಥಾಪನೆಗೊಂಡಲ್ಲಿ ಆರಂಭಿಕವಾಗಿ ಬಿಪಿಎಲ್ ರೋಗಿಗಳಿಗೆ ಉಚಿತ ಚಿಕಿತ್ಸೆಗೆ ನಿಡುವ ಗುರಿ ಹೊಂದಿದೆ. ಇದರಿಂದ ದೊಡ್ಡ ಚಿಕಿತ್ಸಾ ಕೇಂದರಗಳಲ್ಲಿ ರೋಗಿಗಳ ಕಾಯುವಿಕೆಯನ್ನು ಕಡಿಮೆ ಮಾಡಲಿದೆ ಎಂದು ಹೇಳಲಾಗಿದೆ.
ಈ ಯೋಜನೆಯ ಅನುಷ್ಠಾನದ ವೇಗವನ್ನು ಹೆಚ್ಚಿಸಲು ಜೆ.ಪಿ. ನಡ್ಡಾ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, 27 ರಾಜ್ಯಗಳು ಪ್ರಸ್ತಾಪ ಸಲ್ಲಿಸಿದ್ದು, ಉತ್ತರ ಪ್ರದೇಶವೊಂದರಿಂಲೇ 57 ಪ್ರಸ್ತಾಪಗಳು ಸಲ್ಲಿಕೆಯಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.