ಕಠ್ಮಂಡು: 19ನೇ ಶತಮಾನದಲ್ಲಿ ನಿರ್ಮಿಸಲಾದ ನೇಪಾಳದ ಐತಿಹಾಸಿಕ ಸ್ಮಾರಕ ‘ಧರಾರ ಟವರ್’ ಶನಿವಾರ ಸಂಭವಿಸಿದ ಭೂಕಂಪಕ್ಕೆ ನೆಲಕ್ಕುರುಳಿದೆ. ಇದರ ಅವಶೇಷಗಳಡಿಯಿಂದ ಒರ್ವ ಬಾಲಕಿಯ ಶವವನ್ನು ಹೊರ ತೆಗೆಯಲಾಗಿದೆ.
ಈ ಟವರನ್ನು 1832ರಲ್ಲಿ ನಿರ್ಮಿಸಲಾಗಿತ್ತು, ಪ್ರಸಿದ್ಧ ಪ್ರವಾಸಿ ತಾಣವಾದ ಇದನ್ನು ಕಳೆದ 10 ವರ್ಷಗಳಿಂದ ವೀಕ್ಷಕರಿಗಾಗಿ ತೆರೆಯಲಾಗಿತ್ತು. ಇದನ್ನು ವಿಶ್ವಪಾರಂಪರಿಕ ತಾಣವೆಂದು ಘೋಷಿಸಲಾಗಿತ್ತು. ಇದರಲ್ಲಿ 8 ಅಂತಸ್ತುಗಳಿದ್ದು, ಕೊನೆಯ ಅಂತಸ್ತಿನಲ್ಲಿ ವೀಕ್ಷಣೆಗೆ ಬಾಲ್ಕನಿಯನ್ನೂ ನಿರ್ಮಿಸಲಾಗಿತ್ತು. ಇದನ್ನು ಭೀಮ್ಸೇನ್ ಟವರ್ ಎಂದೂ ಕರೆಯಲಾಗುತ್ತದೆ.
ಇದು ನೆಲಕ್ಕುರುಳಿದ ವೇಳೆ ಇದರಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಒಂದು ಮೃತ ದೇಹವನ್ನು ಹೊರ ತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭೂಕಂಪಕ್ಕೆ ಹಲವಾರು ಕಟ್ಟಡಗಳು ನೇಪಾಳದಲ್ಲಿ ಕುಸಿದು ಬಿದ್ದಿವೆ. 3 ಮಂದಿ ಮೃತರಾಗಿದ್ದಾರೆ ಎಂದು ಇದುವರೆಗೆ ಮಾಹಿತಿಗಳು ತಿಳಿಸುತ್ತಿವೆ. ಹಲವಾರು ಮಂದಿಗೆ ಗಾಯಗಳಾಗಿವೆ.
ಭೂಕಂಪದ ಹಿನ್ನಲೆಯಲ್ಲಿ ವಿಮಾನನಿಲ್ದಾಣಗಳನ್ನು ಮುಚ್ಚಲಾಗಿದ್ದು, ಅಲ್ಲಿನ ವಿಮಾನಗಳು ಭಾರತದಲ್ಲಿ ಲ್ಯಾಂಡ್ ಆಗುತ್ತಿವೆ. ನೇಪಾಳ ರಕ್ಷಣಾ ಕಾರ್ಯಕ್ಕೆ ಭಾರತದ ಸಹಾಯವನ್ನು ಕೇಳಿದೆ. ಭಾರತದ ವಾಯುಸೇನೆ ಈಗಾಗಲೇ ಅಲ್ಲಿಗೆ ತೆರಳಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.