ನವದೆಹಲಿ: ಹೊಸ ಮೊಬೈಲ್ ಸಂಪರ್ಕಗಳನ್ನು ಪಡೆಯಲು ಹೆಸರು ಮತ್ತು ವಿಳಾಸ ಹೊಂದಿರುವ ಯುಐಡಿಎಐ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಲಾದ ಇ-ಆಧಾರ್ ಗುರುತಿನ ಚೀಟಿ ಬಳಸಬಹುದಾಗಿದೆ.
ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ ಮುಂತಾದ ವಿವರಗಳುಳ್ಳ ಯುಐಡಿಎಐ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಲಾದ ಇ-ಆಧಾರ್ ಕಾರ್ಡ್ನ್ನು ಹೊಸ ಮೊಬೈಲ್ ಸಂಪರ್ಕಗಳನ್ನು ಪಡೆಯಲು ಬಳಸಬಹುದೆಂದು ಟೆಲಿಕಾಂ ಇಲಾಖೆ ಸ್ಪಷ್ಟಪಡಿಸಿದ್ದು, ಇ-ಆಧಾರ್ ವಿವರಗಳನ್ನು ಇಲಾಖೆ ಪರಿಶೀಲಿಸಲಿದೆ.
ಹೊಸ ಮೊಬೈಲ್ ಸಂಪರ್ಕಗಳನ್ನು ನೀಡುವ ವ್ಯಾಪಾರಸ್ಥರು ಗ್ರಾಹಕರು ನೀಡುವ ವಿವರಗಳನ್ನು ಯುಐಡಿಎಐ ವಿವರಗಳೊಂದಿಗೆ ಹೋಲಿಸಿ ಪರಿಶೀಲಿಸಬೇಕಿದೆ.
ಈ ಹಿಂದೆ ಟೆಲಿಕಾಂ ಇಲಾಖೆ ಇ-ಆಧಾರ್ ಸ್ವೀಕರಿಸಿದ್ದ ಕಾರಣ ಸಿಒಎಐ ನಿರ್ದೇಶಕ ರಾಜನ್ ಮ್ಯಾಥ್ಯೂಸ್ ಹಾಗೂ ಎಯುಎಸ್ಪಿಐ ಕಾರ್ಯದರ್ಶಿ ಅಶೋಕ್ ಸೂದ್ ಕೇಸು ದಾಖಲಿಸಿದ್ದರು. ಆದರೆ ಬಳಕ ಸ್ಪೀಡ್ ಪೋಸ್ಟ್ನಲ್ಲಿ ಪಡೆಯಲಾಗುವ ಆಧಾರ್ ಕಾರ್ಡ್ ಮತ್ತು ಇ-ಆಧಾರ್ಗೆ ಯಾವುದೇ ವ್ಯತ್ಯಾಸವಿಲ್ಲ ಎಂದು ಕಂಪೆನಿ ಒಪ್ಪಿಕೊಂಡಿದೆ.
ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಸಿದ ಹಲವಾರು ಮಂದಿ ಸ್ಪೀಡ್ ಪೋಸ್ಟ್ ಮೂಲಕ ಆಧಾರ್ ಕಾರ್ಡ್ ಪಡೆಯದೇ ಇದ್ದ ಕಾರಣ ಯುಐಡಿಎಐ ವೆಬ್ಸೈಟ್ನಲ್ಲಿ ದೊರೆಯುವ ಇ-ಆಧಾರ್ಗೆ ಪರಿಶೀಲಿಸಿ ಮಾನ್ಯ ನೀಡಲು ಟೆಲಿಕಾಂ ಇಲಾಖೆ ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.