ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರದ ವಸತಿ ಕಾಲನಿಗಳ ಮರು ಅಭಿವೃದ್ಧಿ ಮತ್ತು 5 ಪ್ರಮುಖ ರಸ್ತೆ ಯೋಜನೆಗಳಿಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ 32,000 ಕೋಟಿ ರೂ. ಅನುದಾನ ನೀಡಿದೆ.
ದೆಹಲಿಯ ರಸ್ತೆ ಅಭಿವೃದ್ಧಿಗೆ 658 ಕೋಟಿ ರೂ. ಅನುದಾನ ನೀಡಲಾಗಿದ್ದು, ಮಹಿಪಾಲ್ಪುರ್, ಏರೋಸಿಟಿ, ಐಜಿಐ ವಿಮಾನ ನಿಲ್ದಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಫ್ಲೈಓವರ್ ಮತ್ತು ಅಡರ್ಪಾಸ್ ಯೋಜನೆಗೆ 188 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಐಟಿಒದಲ್ಲಿ ಪಾದಚಾರಿಗಳಿಗೆ ಸ್ಕೈವಾಕ್ ಮತ್ತು ಓವರ್ ಬ್ರಿಡ್ಜ್ ನಿರ್ಮಾಣಕ್ಕೆ 54.34 ಕೋಟಿ ರೂ., ನರೇಲಾ ಬಳಿ ಫ್ಲೈಓವರ್ ಮತ್ತು ರೈಲ್ವೆ ಸೇತುವೆ ನಿರ್ಮಾಣಕ್ಕೆ 437.21 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಫ್ಲೈಓವರ್ ರಾಷ್ಟ್ರೀಯ ಹೆದ್ದಾರಿ-1 ಹಾಗೂ ಬವಾನಾದಲ್ಲಿರುವ ಕೈಗಾರಿಕಾ ಸಂಕೀರ್ಣಕ್ಕೆ ನೇರ ಸಂಪರ್ಕ ಒದಗಿಸಲಿದೆ.
ಕಾಶ್ಮೀರಿ ಗೇಟ್ ಐಎಸ್ಬಿಟಿ ಮತ್ತು ನಿಗಂಬೋಧ್ ಘಾಟ್ ಬಳಿ ರಸ್ತೆ ಅಗಲೀಕರಣಕ್ಕೆ 18.68 ಕೋಟಿ ರೂ. ಹಾಗೂ ರಾಣಿ ಝಾನ್ಸಿ ರಸ್ತೆಯಲ್ಲಿ ಸ್ಥಗಿತಗೊಂಡಿರುವ ಗ್ರೇಡ್ ಸಪರೇಟರ್ ಪೂರ್ಣಗೊಳಿಸಲು 85 ಕೋಟಿ ರೂ. ಮಂಜೂರು ಮಾಡಿದೆ. ಈ ಯೋಜನೆ 2006 ರಲ್ಲಿ ಆರಂಭಗೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.